ಉಡುಪಿ, ಕುಂದಾಪುರ ಹಾಗೂ ಕಾರ್ಕಳದ ವಿವಿಧ ನ್ಯಾಯಾಲಯಗಳಲ್ಲಿ ಶನಿವಾರ ರಾಷ್ಟ್ರೀಯ ಲೋಕ್ ಅದಾಲತ್ ಆಯೋಜನೆಗೊಂಡಿತ್ತು. ಈ ಸಂದರ್ಭ ಒಂದೇ ದಿನ ದಾಖಲೆಯ 30,773 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಯ್ತು. ಈ ಮೆಗಾ ಅದಾಲತ್ ನ ಒಂದು ಕಡೆ ಮಾನವೀಯ ಮುಖ ಹಲವರ ಮೆಚ್ಚುಗೆಗೆ ಪಾತ್ರವಾಗಿದ್ದಷ್ಟೇ ಅಲ್ಲದೆ, ಈ ವೀಡಿಯೊ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಹೌದು... ಅದಾಲತ್ ಗೆ ಬಂದಿದ್ದ 81ರ ಹರೆಯದ ಅಜ್ಜಿಗೆ ನಡೆಯಲಾಗುತ್ತಿರಲಿಲ್ಲ. ಹೀಗಾಗಿ ಅವರು ಕೋರ್ಟ್ ಮುಂದೆ ಆಟೋರಿಕ್ಷಾದಲ್ಲೇ ಕುಳಿತಿದ್ದರು. ವೃದ್ಧೆಯ ಪ್ರಕರಣವನ್ನು ನ್ಯಾಯಾಧೀಶರು ರಿಕ್ಷಾದ ಬಳಿ ತೆರಳಿ ಅಲ್ಲಿಯೇ ಇತ್ಯರ್ಥಗೊಳಿಸಿದ್ದು ವಿಶೇಷವಾಗಿತ್ತು. ಅಜ್ಜಿ ದೇವಕಿ ಶೆಡ್ತಿ ತಮ್ಮ ಮಗಳಾದ ಜಯಂತಿಯವರಿಗೆ ಜಿ.ಪಿ.ಎ. ನೀಡಿದ್ದರು.
ಈ ಸಂಬಂಧ ಅದಾಲತ್ ಗೆ ಬಂದಿದ್ದ ಅವರನ್ನು ಅಲ್ಲಿಗೇ ಬಂದು ಇತ್ಯರ್ಥಗೊಳಿಸಿದ 4ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಜೀತು ಆರ್.ಎಸ್., ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್., ಸಂಧಾನಕಾರರಾದ ನ್ಯಾಯವಾದಿ ಮಿತೇಶ್ ಶೆಟ್ಟಿ ಅವರ ಮಾದರಿ ಕೈಂಕರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.
PublicNext
27/06/2022 12:50 pm