ಮಂಗಳೂರು: ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಕೋಸ್ಟ್ ಗಾರ್ಡ್ ICG, CSP ಮತ್ತು ಕರ್ನಾಟಕ ಪೊಲೀಸ್ ಸಿಬ್ಬಂದಿಯಿಂದ 75 ವಾಹನ ಚಾಲಕರನ್ನು ಒಳಗೊಂಡ ಮೋಟಾರ್ ಸೈಕಲ್ ರ‍್ಯಾಲಿ ಇಂದು ನಡೆಯಿತು. ರ‍್ಯಾಲಿಗೆ ಮಂಗಳೂರು ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಚಾಲನೆ ನೀಡಿದರು.
ಬೈಕ್ ರ‍್ಯಾಲಿಯು ಪಣಂಬೂರು ಬೀಚ್‌ನಿಂದ ಕಾಪುವರೆಗೆ 75 ಕಿಮೀ ದೂರದವರೆಗೆ ಕ್ರಮಿಸಿತು. ಬೈಕ್ ರೈಡಿಂಗ್ ವೇಳೆ ಬೈಕರ್‌ಗಳು ಪರಿಸರ ನಿರ್ವಹಣೆ ಹಾಗೂ ರಕ್ಷಣೆಯ ಪ್ರಾಮುಖ್ಯತೆಯ ಕುರಿತು ಸ್ಥಳೀಯ ಜನರಲ್ಲಿ ಜಾಗೃತಿ ಮೂಡಿಸಿದರು. ಈ ಮೂಲಕ ಸಮುದ್ರದಲ್ಲಿ ಸುರಕ್ಷತೆ, ಭದ್ರತೆ ಮತ್ತು ಪರಿಸರ ಸಮಸ್ಯೆಗಳ ಬಗ್ಗೆ ಕರಾವಳಿಗರನ್ನು ಮೀನುಗಾರರನ್ನು ಜಾಗೃತಿಗೊಳಿಸುವ ಗುರಿಯನ್ನು ಹೊಂದಿದೆ.
Kshetra Samachara
07/06/2022 08:02 pm