ಸುಳ್ಯ: ಸುಳ್ಯದಿಂದ ಇತ್ತೀಚೆಗೆ ಅಮರನಾಥ ಯಾತ್ರೆ ಕೈಗೊಂಡಿರುವ 12 ಮಂದಿ ಯಾತ್ರಿಕರು ಸುರಕ್ಷಿತವಾಗಿರುವುದಾಗಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.ಅಮರನಾಥ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳು ತೊಂದರೆಗೆ ಸಿಲುಕಿದ್ದಾರೆ ಎಂಬ ಸುಳ್ಳು ಸುದ್ದಿ ಹರಡಿದೆ. ಯಾತ್ರೆಯಲ್ಲಿ ಪಾಲ್ಗೊಂಡಿರುವ ನಾವೆಲ್ಲರೂ ಯಾವುದೇ ತೊಂದರೆಗೆ ಸಿಲುಕಿಕೊಂಡಿಲ್ಲ .
ನಾವು ಹನ್ನೆರಡು ಮಂದಿ ಸುರಕ್ಷಿತವಾಗಿ ಜಮ್ಮು ಕಾಶ್ಮೀರ ಸೇರಿದ್ದೇವೆ. ಸುಳ್ಳು ವದಂತಿಗೆ ನಮ್ಮ ಮನೆಯವರು ಆತಂಕ ಪಡಬೇಕಾಗಿಲ್ಲ. ನಾವೆಲ್ಲರೂ ಅಮರನಾಥ ಯಾತ್ರೆ ಯಶಸ್ವಿಯಾಗಿ ಪೂರೈಸಿ ಮತ್ತೆ ಊರಿಗೆ ಹಿಂತಿರುಗುತ್ತೇವೆ ಎಂದು ಯಾತ್ರೆಯ ನೇತೃತ್ವ ವಹಿಸಿಕೊಂಡಿರುವ ಸಂಘಟಕ ಅಜ್ಜಾವರ ಗ್ರಾಮದ ವಿನಯ್ ನಾರಾಲು ಈ ಮೂಲಕ ತಿಳಿಸಿದರು.
Kshetra Samachara
09/07/2022 10:53 pm