ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕಳವಾದ ಸೊತ್ತು ಮಾಲೀಕರಿಗೆ ಮರಳಿಸುವ ಕವಾಯತು

ಮಂಗಳೂರು: ಕಳವಾದ ಸೊತ್ತುಗಳನ್ನು ಮರಳಿಸುವ ಕವಾಯತು ಶನಿವಾರ ‌ಮಂಗಳೂರಿನ ಪೊಲೀಸ್ ಮೈದಾನದಲ್ಲಿ ನಡೆಯಿತು.

ಮಂಗಳೂರಿನ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನವಾದ ಆಭರಣ, ವಾಹನಗಳು ಸೇರಿದಂತೆ 9.5 ಕೋಟಿ ರೂ.ಗಳ ಆಸ್ತಿಯನ್ನು 2019-20ನೇ ಸಾಲಿನಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಇವುಗಳನ್ನು ಮಂಗಳೂರು ನಗರದ ಪೊಲೀಸ್ ಕಮಿಷನರ್ ನೇತೃತ್ವದಲ್ಲಿ ನಡೆದ ಕವಾಯತು ಕಾರ್ಯಕ್ರಮದಲ್ಲಿ ಮಾಲೀಕರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭ ಒಟ್ಟು 1.49 ಕೋಟಿ ರೂ.ಗಳ ಆಸ್ತಿಯನ್ನು ಮಾಲೀಕರಿಗೆ ಹಸ್ತಾಂತರಿಸಲಾಯಿತು. ಈ ಪೈಕಿ 2.277 ಕೆಜಿ ಚಿನ್ನ, 25 ದ್ವಿಚಕ್ರ ವಾಹನಗಳು, 19 ಮೊಬೈಲ್, 11 ಇತರ ಆಸ್ತಿ ಮತ್ತು 48,13,951 ರೂ. ಹಸ್ತಾಂತರಿಸಲಾಯಿತು.

Edited By : Nagesh Gaonkar
Kshetra Samachara

Kshetra Samachara

03/10/2020 06:38 pm

Cinque Terre

49.93 K

Cinque Terre

1

ಸಂಬಂಧಿತ ಸುದ್ದಿ