ಉಡುಪಿ: ದೇವರ ಕೋರ್ಟ್ ನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ; ಭಾಸ್ಕರ ಶೆಟ್ಟಿ ಹೆತ್ತವ್ವನ ವೇದನೆ

ಉಡುಪಿ: ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ತೀರ್ಪು ಪ್ರಕಟಗೊಂಡ ಬಳಿಕ ತಾಯಿ ಗುಲಾಬಿ ಶೆಟ್ಟಿಯವರು ತನ್ನ ನೋವು ವ್ಯಕ್ತ ಪಡಿಸಿದ್ದು ಹೀಗೆ...

"ಕೋರ್ಟಿನ ತೀರ್ಪು ಬಂದಿದೆ ಸರಿ. ಆದರೆ, ನನ್ನ ಮಗನನ್ನು ಕೊಲೆಗೈದ ಪಾತಕಿಗಳಿಗೆ ದೇವರ ತೀರ್ಪು ಬರಲು ಇನ್ನೂ ಬಾಕಿಯಿದೆ. ಅವರು ಎಸಗಿರುವ ಘೋರ ಪಾತಕಕ್ಕೆ ಅದನ್ನವರು ಅನುಭವಿಸಲೇ ಬೇಕು"

ದೇಶವನ್ನೇ ಬೆಚ್ಚಿ ಬೀಳಿಸಿದ ಎನ್ ಆರ್ ಐ ಉದ್ಯಮಿ ಉಡುಪಿಯ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೊಲೆ ನಡೆದು 5 ವರ್ಷಗಳ ಬಳಿಕ ಜೂ.8ರಂದು ಪತ್ನಿ, ಮಗ ಸಹಿತ ಮೂವರು ಆರೋಪಿಗಳಿಗೆ ಉಡುಪಿ ಸೆಶನ್ಸ್ ಕೋರ್ಟ್ ಜೀವಿತಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಆದರೆ, ಮಗನನ್ನು ಕಳಕೊಂಡ ಹೆತ್ತ ತಾಯಿ ಕಣ್ಣೀರಿನಲ್ಲೇ ಕೈತೊಳೆಯುತ್ತಿದ್ದಾರೆ. ಈ ತೀರ್ಪಿನಿಂದ ಒಂದಿಷ್ಟು ಸಾಂತ್ವನ ದೊರೆತರೂ ಶೋಕದಿಂದ ನಲುಗಿ ಹೋಗಿರುವ ಹಿರಿಜೀವ ಮನೆ ಹೊಸ್ತಿಲಲ್ಲಿ ನಿಸ್ತೇಜವಾಗಿ ಕುಳಿತು ಮರುಗುತ್ತಿರುವುದು ಕಂಡರೆ ಎಂತವರ ಮನ ಕರಗದಿರದು.

ಕೊಲೆಗಾರರಿಗೆ ಜೀವಿತಾವಧಿ ಜೈಲು ಶಿಕ್ಷೆ ಆಗಿದೆ ಎಂಬುದಕ್ಕೆ ಮುಖದಲ್ಲಿ ಒಂದಿಷ್ಟು ಸಂತಸವಿದ್ದರೂ ಮನದೊಳಗಿನ ನೋವು ಅಡಗಿಸಲಾಗದೆ.

ಮಗನ ಪೋಟೊ ಅಪ್ಪಿಕೊಂಡು "ನನ್ನ ಮಗನಿಗೆ ನ್ಯಾಯ ಸಿಕ್ಕಿದೆ". ಅವರು ಯಾವ ಕೋರ್ಟಿಗೆ ಹೋದರೂ ಭಗವಂತನ ಕೋರ್ಟಿನಿಂದ ತಪ್ಪಿಸಿಕೊಳ್ಳಲು ಖಂಡಿತಾ ಸಾಧ್ಯವಿಲ್ಲ ಎನ್ನುತ್ತಾ ಮೌನವಾದರು.

Kshetra Samachara

Kshetra Samachara

14 days ago

Cinque Terre

11.77 K

Cinque Terre

3

 • Usha Poojary
  Usha Poojary

  nija amma....erena maghe yenchala uppad...erena bene irege gothu ..court korina shikshe mast yeliya. aanda dewer aleg korpina shikshe bayankarawadu uppundu..

 • Prasadh Shetty
  Prasadh Shetty

  Rajesh, ಒಳ್ಳೆತನಕ್ಕೆ ಒಳ್ಳೆ ಬೆಲೆ ಕೆಟ್ಟ ತನಕ್ಕೆ ಕೆಟ್ಟ ಬೆಲೆ ಎಲ್ಲಾ ಕಾಲದ ಮಹಿಮೆ

 • Rajesh
  Rajesh

  eegina kaaladalli paapigale olledagodu.. ollethanakke edu Kala alla, belenu ella...