ಹಳೆಯಂಗಡಿ: "ಒಂಟೆಗೆ ಗಿಡಗಳೇ ತುತ್ತು, ನಮ್ಮ ಹೊಟ್ಟೆಗೆ ತಣ್ಣೀರಬಟ್ಟೆಯೇ ಹಿಟ್ಟು" ; ಮಾಲೀಕ ಕಣ್ಣೀರು

ಮುಲ್ಕಿ: ಕೊರೊನಾ ಲಾಕ್ ಡೌನ್ ನಿಂದಾಗಿ ಸರ್ವ ವರ್ಗದ ವೃತ್ತಿನಿರತರು ತೀವ್ರ ಸಂಕಷ್ಟಕ್ಕೀಡಾಗಿದ್ದು, ಜೀವನ ನಿರ್ವಹಣೆಗೆ ಏದುಸಿರು ಬಿಡುವಂತಾಗಿದೆ. ಅದರಲ್ಲೂ ಅನ್ಯ ರಾಜ್ಯಗಳಿಂದ ಹೊಟ್ಟೆಪಾಡಿಗಾಗಿ ಕರಾವಳಿ ಜಿಲ್ಲೆಗಳಿಗೆ ಬಂದಿರುವ ಬಡ ಒಂಟೆ ಮಾಲೀಕರ ಸ್ಥಿತಿಯಂತೂ ಕರುಣಾಜನಕ.

ಪಣಂಬೂರು ಸಮುದ್ರ ತೀರ ಪರಿಸರದಲ್ಲಿ ಬೀಚ್ ಗೆ ಬರುತ್ತಿದ್ದ ಪ್ರವಾಸಿಗರಿಗೆ ಒಂಟೆ ಸವಾರಿ ಮಾಡಿಸುತ್ತಾ ಮನರಂಜನೆ ಒದಗಿಸುತ್ತಿದ್ದ ಒಂಟೆ ಮಾಲೀಕರಂತೂ "ಲಾಕ್" ನಿಂದಾಗಿ ಸಂಪೂರ್ಣ ಕಂಗೆಟ್ಟು ಹೋಗಿದ್ದಾರೆ.

ಗುರುವಾರ ಬೆಳಗ್ಗೆ ಹಳೆಯಂಗಡಿ ರಾ.ಹೆ. ಬಳಿ ತನ್ನ ಒಂಟೆಗೆ ಮಾಲೀಕನೊಬ್ಬ ಹಸಿರು ಹುಲ್ಲು ಮೇಯಿಸುತ್ತಿರುವ ದೃಶ್ಯ ಕಂಡು ಬಂತು.
ಈ ಸಂದರ್ಭ 'ಪಬ್ಲಿಕ್ ನೆಕ್ಸ್ಟ್' ಆತನನ್ನು ಮಾತನಾಡಿಸಿದಾಗ ಆತ ಮ್ಲಾನ ವದನನಾಗಿ ಉತ್ತರಿಸಿದ್ದು, ಹೀಗೆ...

"ಮಧ್ಯಪ್ರದೇಶದಿಂದ ಒಂಟೆಯೊಂದಿಗೆ ಬಂದಿರುವ ತಾನು, ಕರ್ನಾಟಕ ಕರಾವಳಿಯ ಪಣಂಬೂರು ಸಹಿತ ನಾನಾ ಬೀಚ್ ಗಳಲ್ಲಿ ಹಿರಿಯರ ಸಹಿತ ಮಕ್ಕಳನ್ನು ಒಂಟೆ ಮೇಲೆ ಕೂರಿಸಿ ಇಂತಿಷ್ಟು ಶುಲ್ಕ ಪಡೆಯುವ ಮೂಲಕ ಜೀವನ ಸಾಗಿಸುತ್ತಿದ್ದೇನೆ.

ಲಾಕ್ ಡೌನ್ ಅವಧಿಯಲ್ಲೀಗ ಸಮುದ್ರ ತೀರಕ್ಕೆ ಬರಲು ಪ್ರವಾಸಿಗರಿಗೆ ನಿಷೇಧ ಹೇರಿದ್ದರಿಂದ ನಮಗೇ ಹೊಟ್ಟೆಗೆ ಸರಿಯಾಗಿ ಆಹಾರವಿಲ್ಲ. ಇನ್ನು ನಮ್ಮ ಒಂಟೆಗೆ ಎಲ್ಲಿಂದ ಆಹಾರ ಖರೀದಿಸಿ ತರಲಿ, ರಸ್ತೆ ಬದಿ ಮತ್ತಿತರ ಸ್ಥಳದಲ್ಲಿ ಬೆಳೆದಿರುವ ಗಿಡಗಳೇ ಒಂಟೆಗೆ ತುತ್ತು" ಎಂದು ದುಃಖಿಸುತ್ತಾ ತನ್ನ ಜೀವನಾಧಾರವಾದ ಒಂಟೆಗೆ ಹುಲ್ಲು ಮೇಯಿಸುವುದರಲ್ಲಿಯೇ ನಿರತನಾದ.

Kshetra Samachara

Kshetra Samachara

14 days ago

Cinque Terre

9.75 K

Cinque Terre

1

  • mangesha
    mangesha

    nimma kasta bega parihara vagali