ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಅತೀ ಗಣ್ಯ ವ್ಯಕ್ತಿಗಳ ಆಗಮನದ ವೇಳೆ ಹಾಗೂ ಬಂದೋಬಸ್ತು ಕರ್ತವ್ಯದಲ್ಲಿ ಸ್ಪೋಟಕ ಪತ್ತೆ ಕರ್ತವ್ಯವನ್ನು 11 ವರ್ಷಗಳಿಂದ ಯಶಸ್ವಿಯಾಗಿ ನಿರ್ವಹಿಸಿಕೊಂಡು ಬಂದಿದ್ದ ಶ್ವಾನ ಗೀತಾ ಇಂದು ಮೃತಪಟ್ಟಿದೆ.
ಲ್ಯಾಬ್ರಡಾರ್ ರಿಟ್ರೀವರ್ ತಳಿಯ ಹೆಣ್ಣು ಶ್ವಾನವಾಗಿರುವ ಗೀತಾಗೆ ಸದ್ಯ 11 ವರ್ಷ 2 ತಿಂಗಳು. ಪೊಲೀಸ್ ಇಲಾಖೆಯಲ್ಲಿ 11 ವರ್ಷಗಳಿಂದ ಸೇವೆಯಲ್ಲಿದೆ. 2011ರ ಮೇ 21ರಲ್ಲಿ ಜನಿಸಿರುವ ಗೀತಾ 2011ರ ಆಗಸ್ಟ್ 19ರಂದು ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿದೆ. ಆಗಸ್ಟ್ 19ರಿಂದ 2012ರ ಜುಲೈ 19ರವರೆಗೆ 11 ತಿಂಗಳುಗಳ ಕಾಲ ಬೆಂಗಳೂರಿನ ಆಡುಗೋಡಿ(ಸಿಎಆರ್ ಸೌತ್) ಯಲ್ಲಿ ತರಬೇತಿ ಪಡೆದು ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿತ್ತು.
ಸ್ಪೋಟಕ ಪತ್ತೆಯಲ್ಲಿ ಕರ್ತವ್ಯದಲ್ಲಿದ್ದ ಶ್ವಾನ ಗೀತಾ ಮಂಗಳೂರಿನಲ್ಲಿ ಅತೀ ಗಣ್ಯ ವ್ಯಕ್ತಿಗಳ ಆಗಮನದ ಸಂದರ್ಭ ಹಾಗೂ ಇತರೇ ಪ್ರಮುಖ ಬಂದೋಬಸ್ತಿನಲ್ಲಿ 11 ವರ್ಷದಲ್ಲಿ ಕರ್ತವ್ಯ ನಿರ್ವಹಿಸಿತ್ತು. ನಾಳೆ ಬೆಳಗ್ಗೆ 8ಗಂಟೆಗೆ ಈ ಶ್ವಾನದ ಅಂತ್ಯಸಂಸ್ಕಾರವು ಡಿಎಆರ್ ಗ್ರೌಂಡ್ ನಲ್ಲಿ ನಡೆಯಲಿದೆ.
PublicNext
03/09/2022 11:02 pm