ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಬಿಸಿಯೂಟ ನೌಕರರ ಬಾಕಿ ವೇತನ ಪಾವತಿಸದಿದ್ದರೆ ಪ್ರತಿಭಟನೆ: ಜಿ.ಎ ಕೋಟೆಯಾರ್ ಎಚ್ಚರಿಕೆ

ಉಡುಪಿ: ರಾಜ್ಯದ 1,15000 ಬಿಸಿಯೂಟದ ಮಹಿಳಾ ನೌಕರರು ಸಮಸ್ಯೆಯಲ್ಲಿದ್ದಾರೆ. ಅವರ ಬೇಡಿಕೆ-ಸಮಸ್ಯೆಗಳನ್ನು ಈಡೇರಿಸದಿದ್ದಲ್ಲಿ ಹೋರಾಟ ನಡೆಸಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತ, ಮಾಹಿತಿ ಸೇವಾ ಸಮಿತಿಯ ಜಿ.ಎ ಕೊಟೆಯಾರ್ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಕಳೆದ ಏಪ್ರಿಲ್‌ನಿಂದ ಬಾಕಿ ಇರುವ ಬಿಸಿಯೂಟ ನೌಕರರ ಬಾಕಿ ವೇತನವನ್ನು ಸರಕಾರ ಕೂಡಲೇ ಪಾವತಿ ಮಾಡಬೇಕು. 10 ದಿನಗಳೊಳಗೆ ಬಾಕಿ ವೇತನ ನೀಡದಿದ್ದಲ್ಲಿ ಸೆ.10 ರಿಂದ ಉಡುಪಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಅವರು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಜಿ.ಎ ಕೋಟೆಯಾರ್ ಉಡುಪಿಗೆ ಇಎಸ್‌ಐ ಆಸ್ಪತ್ರೆ ಮಂಜೂರಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಹಲವು ಜನಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ.

Edited By : Somashekar
Kshetra Samachara

Kshetra Samachara

03/09/2022 06:28 pm

Cinque Terre

7.37 K

Cinque Terre

2

ಸಂಬಂಧಿತ ಸುದ್ದಿ