ಮಂಗಳೂರು: ಪೊಲೀಸ್ ಸಿಬ್ಬಂದಿಯೊಬ್ಬರು ಹಾಡಿನ ಮೂಲಕ ಪೊಲೀಸರ ಬಗ್ಗೆ ಜನಜಾಗೃತಿ ಮೂಡಿಸಿದ್ದಾರೆ. ಹೌದು, ಈ ಪೊಲೀಸ್ ಸಿಬ್ಬಂದಿ ಹೆಸರು ಗೋಪಾಲಕೃಷ್ಣ. ಇವರು ಮಂಗಳೂರಲ್ಲಿ ಸಂಗೀತಗಾರನಾಗಿ ಹೊರಹೊಮ್ಮುತ್ತಿರುವ ಪ್ರತಿಭೆ. ಇವರಿಗೆ ಸಂಗೀತ ಕ್ಷೇತ್ರದಲ್ಲಿ ಆಸಕ್ತಿ ಮೂಡಿದ್ದು ಲಾಕ್ ಡೌನ್ ಸಮಯದಲ್ಲಿ. ಆಗ ಎಲ್ಲರೂ ಮನೆ ಹೊರಗೆ ಬಾರದೇ ಒಳಗೆ ಕುಳಿತಿದ್ದಾಗ 24 ತಾಸು ಕಾರ್ಯ ನಿರ್ವಹಿಸುತ್ತಿದ್ದವರು ಪೊಲೀಸರು. ಇವರು ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ರೂ ಕೂಡ ಸಂಗೀತ ಕೇಳಿ ತಾನೂ ಕೂಡ ತಮ್ಮ ಸಿಬ್ಬಂದಿಗಾಗಿ ಒಂದು ಹಾಡಿನ ಮುಖೇನ ತಮ್ಮ ಕಷ್ಟ ಏನು ಎಂಬುದನ್ನು ತೋರಿಸಬೇಕೆಂದು ತೀರ್ಮಾನಿಸಿ ತನ್ನ ಯೋಚನೆಯನ್ನು ಗಾಯಕ ವಿಶ್ವಾಸ್ ಗುರುಪುರ ಅವರಲ್ಲಿ ಹೇಳಿಕೊಂಡಾಗ ವಿಶ್ವಾಸ್ ಹಾಗೂ ಅವರ ತಂಡ ತಕ್ಷಣ ಸ್ಪಂದಿಸಿ ಗೋಪಾಲಕೃಷ್ಣ ಅವರ ಪ್ರತಿಭೆಗೆ ಸಾಥ್ ನೀಡಿದ್ದಾರೆ. ಬಳಿಕ ಈ ತಂಡ “ವಿ ಆರ್ ವಿದ್ ಯೂ” ಎಂಬ ಟೈಟಲ್ ನೊಂದಿಗೆ ಒಂದು ಹಾಡನ್ನು ರಚಿಸಿ ಪೊಲೀಸರಿಗಾಗಿ ಅರ್ಪಿಸಿದ್ದಾರೆ. ಅರ್ಪಣಾ ಕಾರ್ಯವನ್ನು ಮಂಗಳೂರಿನ ದೀಪಾ ಕಂಫರ್ಟ್ ನ ಹಾಲ್ ನಲ್ಲಿ ಬಿಡುಗಡೆ ಗೊಳಿಸಲಾಯಿತು. ಟ್ರಾಫಿಕ್ ಎಸಿಪಿ ನಟರಾಜ್, ಡಾ.ಸದಾನಂದ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
15/11/2020 01:41 pm