ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ತಮಿಳುನಾಡು ಮೀನುಗಾರರಿಂದ ಗುಂಡಾಗಿರಿ: ಮಲ್ಪೆ ಮೀನುಗಾರರಿಂದ ಆಕ್ರೋಶ

ಮಲ್ಪೆ: ತಮಿಳುನಾಡು ಮೀನುಗಾರರು ಇಲ್ಲಿಗೆ ಆಗಮಿಸಿ ಗೂಂಡಾಗಿರಿ ನಡೆಸಿದ್ದಲ್ಲದೆ ಮೀನುಗಾರಿಕೆ ನಡೆಸುತ್ತಿದ್ದ ಮಲ್ಪೆಯ ಬೋಟ್ ಗೆ ಹಾನಿ ಮಾಡಿದ ಘಟನೆ ನಡೆದಿದೆ.

ಕಾನೂನುಬಾಹಿರವಾಗಿ ಮೀನುಗಾರಿಕೆ ನಡೆಸುತ್ತಿದ್ದ ತಮಿಳುನಾಡು ಮೀನುಗಾರರರನ್ನು ಪ್ರಶ್ನಿಸಿದ್ದಕ್ಕೆ ದಾದಾಗಿರಿ ಬೇರೆ ನಡೆಸಿದ್ದಾರೆ.

ತಮಿಳುನಾಡಿನ ಮೀನುಗಾರರು ಮಲ್ಪೆ ವ್ಯಾಪ್ತಿಯಲ್ಲಿ ಲೈಟ್ ಅಳವಡಿಸಿ ಮೀನು ಹಿಡಿಯುತ್ತಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಮಲ್ಪೆ ಮೀನುಗಾರರನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ,.ಮಾತ್ರವಲ್ಲ ,ಮಲ್ಪೆಯಿಂದ ತೆರಳಿದ್ದ ಬೋಟಿಗೆ ತಮಿಳು ಮೀನುಗಾರರು ಹಾನಿ ಮಾಡಿದ್ದಾರೆ.

ಈ ವೇಳೆ ಮಲ್ಪೆ ಮೀನುಗಾರರು ಪ್ರತಿಭಟನೆ ನಡೆಸಿದರು.ಆಳ ಸಮುದ್ರಕ್ಕೆ ತೆರಳಿದ್ದ ಎಲ್ಲಾ ಬೋಟುಗಳು ವಾಪಸ್ ಆಗಿ ಬೋಟಿಗೆ ಹಾನಿ ಮಾಡಿದ ತಮಿಳು ಮೀನುಗಾರರನ್ನು ಕರೆತಂದು ಮುತ್ತಿಗೆ ಹಾಕಿ ಆಕ್ರೋಶ ವ್ತಕ್ತಪಡಿಸಿದರು. ಈ ವೇಳೆ ಸ್ಥಳಕ್ಕೆ ಬಂದ ಕರಾವಳಿ‌ಕಾವಲು ಪಡೆ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

Edited By : Manjunath H D
Kshetra Samachara

Kshetra Samachara

22/10/2020 06:22 pm

Cinque Terre

50.17 K

Cinque Terre

4

ಸಂಬಂಧಿತ ಸುದ್ದಿ