ಕಡಬ: ಕರ್ನಾಟಕ ಲೋಕಾಯುಕ್ತ ಪೊಲೀಸ್ ಮಂಗಳೂರು ಡಿವೈಎಸ್ಪಿ ಚೆಲುವರಾಜ್ ಮತ್ತು ಸಿಬ್ಬಂದಿಗಳಿಂದ ಕಡಬದಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಯಿತು.
ಸಾರ್ವಜನಿಕರಿಗೆ ಸರಕಾರಿ ಅಧಿಕಾರಿಗಳು ಕೆಲಸದಲ್ಲಿ ವಿಳಂಭ ನೀತಿ ಮಾಡಿದ್ದಲ್ಲಿ, ಕೆಲಸ ಮಾಡಲು ಲಂಚದ ಬೇಡಿಕೆ ಇಟ್ಟಲ್ಲಿ ನೇರವಾಗಿ ಲೋಕಾಯುಕ್ತ ಪೊಲೀಸರನ್ನು ಸಂಪರ್ಕಿಸುವಂತೆ ಲೋಕಾಯುಕ್ತ ಡಿವೈಎಸ್ಪಿ ಚೆಲುವರಾಜ್ ಅವರು ಮನವಿ ಮಾಡಿದರು. ಜಾಗದ ತಕರಾರು, ರಸ್ತೆಯ ಸಮಸ್ಯೆ, ಅಧಿಕಾರಿಗಳಿಂದ ಕೆಲಸದಲ್ಲಿ ವಿಳಂಭ, ಜಾಗದ ನಕ್ಷೆಯ ಸಮಸ್ಯೆಗಳು, ಸೇರಿದಂತೆ ಸುಮಾರು ಏಳು ದೂರುಗಳು ಕಡಬದಲ್ಲಿ ಇಂದು ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿದೆ. ಸಾರ್ವಜನಿಕಕರು ಈ ಕಾರ್ಯಕ್ರಮದ ಪ್ರಯೋಜನ ಪಡೆಯುವಂತೆ ಡಿವೈಎಸ್ಪಿ ವಿನಂತಿ ಮಾಡಿದರು. ಮಂಗಳೂರಿನಿಂದ ಲೋಕಾಯುಕ್ತ ಅಧಿಕಾರಿಗಳು ಆಗಮಿಸಿ ಸುಮಾರು 15 ನಿಮಿಷಗಳ ನಂತರದಲ್ಲಿ ಸ್ಥಳೀಯ ಅಧಿಕಾರಿಗಳು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆಗಮಿಸಿದರು.
ಕಾರ್ಯಕ್ರಮದಲ್ಲಿ ಉಪತಹಸೀಲ್ದಾರ್ ಮನೋಹರ್ ಕೆ. ಟಿ, ಕಡಬ ಪ. ಪಂಚಾಯತ್ ಮುಖ್ಯಧಿಕಾರಿ ಫಕೀರ ಮೂಲ್ಯ, ಕಂದಾಯ ನಿರೀಕ್ಷಕ ಪ್ರಥ್ವಿರಾಜ್, ವಿಎ ಶಶಿಕಲಾ, ಸರ್ವೇ ಇಲಾಖೆಯ ಸೂಪರ್ವೈಸರ್ ಚಂದ್ರಶೇಖರ್, ಲೋಕಾಯುಕ್ತ ಪೊಲೀಸ್ ಸಿಬ್ಬಂದಿಗಳಾದ ಶರತ್ ಸಿಂಗ್, ಗಾಯತ್ರಿ ಮುಂತಾದವರು ಉಪಸ್ಥಿತರಿದ್ದರು.
Kshetra Samachara
29/09/2022 05:21 pm