ಉಡುಪಿ: ಉಡುಪಿ ಎಸ್‌ಪಿ ಎನ್. ವಿಷ್ಣುವರ್ಧನ್ ವರ್ಗಾವಣೆಗೊಂಡಿದ್ದು ಅವರ ಜಾಗಕ್ಕೆ ಹಾಕೈ ಅಕ್ಷಯ್ ಮಚೀಂದ್ರ ಉಡುಪಿಯ ನೂತನ ಎಸ್‌ಪಿಯಾಗಿ ನೇಮಕಗೊಂಡಿದ್ದಾರೆ.
ವಿಷ್ಣುವರ್ದನ್ ಅವರನ್ನು ಬೆಂಗಳೂರು ಇಂಟಲಿಜೆನ್ಸ್ ವಿಭಾಗದ ಎಸ್‌ಪಿ ಆಗಿ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.ನೂತನ ಎಸ್‌ಪಿ ಹಾಕೈ ಅಕ್ಷಯ್ ಮಚೀಂದ್ರ, 2005ರಲ್ಲಿ ಐಪಿಎಸ್ ಸೇವೆಗೆ ಸೇರಿದ್ದರು. ಈ ಹಿಂದೆ 2020ರಲ್ಲಿ ಅಕ್ಷಯ್ ಮಚೇಂದ್ರರನ್ನು ಉಡುಪಿ ಎಸ್‌ಪಿ ಆಗಿ ಸರಕಾರ ವರ್ಗಾವಣೆ ಮಾಡಿತ್ತಾದರೂ, ಒಂದೇ ದಿನದಲ್ಲಿ ಆದೇಶದಲ್ಲಿ ಬದಲಾವಣೆ ಮಾಡಿ ಎನ್. ವಿಷ್ಣುವರ್ಧನ್‌ರನ್ನು ನೇಮಿಸಿತ್ತು. ಇದೀಗ ಮತ್ತೆ ಉಡುಪಿ ಎಸ್ ಪಿ ಆಗಿ ಅಕ್ಷಯ್ ಮಚೇಂದ್ರ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
Kshetra Samachara
16/08/2022 09:15 pm