ಮಂಗಳೂರು: ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯಾದ್ಯಂತ ಜಾರಿಯಾಗಿರುವ ರಾತ್ರಿ ನಿರ್ಬಂಧವು 9ಗಂಟೆವರೆಗೆ ಸಡಿಲಿಕೆ ಮಾಡಿ ದ.ಕ.ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಸಂಜೆ 6ರಿಂದ ಬೆಳಗ್ಗೆ 6ಗಂಟೆಯವರೆಗೆ ರಾತ್ರಿ ನಿರ್ಬಂಧ ಜಾರಿಯಲ್ಲಿತ್ತು. ಆದರೆ ಆಗಸ್ಟ್ 5ರಿಂದ ಮುಂದಿನ ಮೂರು ದಿನಗಳ ಕಾಲ ಈ ಆದೇಶವನ್ನು ರಾತ್ರಿ 9ರಿಂದ ಸಂಜೆ 6ರವರೆಗೆ ನಿರ್ಬಂಧ ವಿಧಿ ಡಿಸಿ ಆದೇಶಿಸಿದ್ದಾರೆ.
ಹೊಸ ಕಾನೂನಿನ್ವಯ ತುರ್ತುಸೇವೆಗಳನ್ನು ಹೊರತುಪಡಿಸಿ ಈ ದಿನಗಳಲ್ಲಿ ರಾತ್ರಿ 9ರಿಂದ ಬೆಳಗ್ಗೆ 6ರವರೆಗೆ ಅಂಗಡಿ ಮುಂಗಟ್ಟುಗಳು ಮುಚ್ಚಲಿವೆ. ನಾಳೆಯಿಂದ ಮದ್ಯದಂಗಡಿಗಳನ್ನು ಸಂಜೆ 6ರವರೆಗೆ ತೆರೆಯಲು ಅವಕಾಶ ನೀಡಲಾಗಿದೆ. ಉಳಿದಂತೆ 144ಸೆಕ್ಷನ್ ಜಾರಿಯಲ್ಲಿ ಇರುತ್ತದೆ.
Kshetra Samachara
04/08/2022 07:29 pm