ಕುಕ್ಕೆ ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿದ ವೇಳೆ ಪೊಲೀಸ್ ಠಾಣೆಗೆ ಟರ್ಪಾಲ್ ಹೊದಿಕೆ ಕಂಡು ಗೃಹ ಸಚಿವರು ಅಸಮಾಧಾನಗೊಂಡ ಘಟನೆ ನಡೆದಿದೆ. ಹೊಸ ಠಾಣೆ ಕಟ್ಟಡ ಕಾಮಗಾರಿ ವಿಳಂಬಕ್ಕೆ ಆರಗ ಜ್ಞಾನೇಂದ್ರ ಕೋಪಗೊಂಡು ನೂತನ ಕಟ್ಟಡ ನಿರ್ಮಾಣ ಇಂಜಿನಿಯರ್ ಗೆ ಕರೆ ಮಾಡಿ ತರಾಟೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. 2017ರಲ್ಲೇ ಸರ್ಕಾರ ಹೊಸ ಠಾಣೆ ಕಟ್ಟಡ ನಿರ್ಮಾಣಕ್ಕೆ 1.23 ಕೋಟಿ ಮೀಸಲಿಟ್ಟಿದೆ. ಟೆಂಡರ್ ಆದರೂ ಹಣ ಸಾಕಾಗಲ್ಲ ಅಂತ ಕಟ್ಟಡ ಕಾಮಗಾರಿ ವಿಳಂಬವಾಗಿತ್ತು.
ಇಂಜಿನಿಯರ್ ಗೆ ಕರೆ ಮಾಡಿ ತರಾಟೆ ತೆಗೆದಕೊಂಡ ಸಚಿವ ಆರಗ ಜ್ಞಾನೇಂದ್ರ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಆರಂಭಿಸಲು ಸೂಚನೆ ನೀಡಿದ್ರು. ಈಗಿನ ಠಾಣೆಗೆ ಟರ್ಪಾಲ್ ಹೊದಿಕೆ ಹಾಕಿದ್ದಾರೆ, ನಮಗೇ ನಾಚಿಕೆಯಾಗುತ್ತೆ. ತಕ್ಷಣ ಬಂದು ಅಂದಾಜು ಪಟ್ಟಿ ತಯಾರಿಸಿ ಕೆಲಸ ಶುರು ಮಾಡಿ ಹೊಸ ಠಾಣೆ ಕಿತ್ತು ಮಾಡ್ತಿರೋ, ಹೊಸ ಜಾಗದಲ್ಲಿ ಮಾಡ್ತಿರೋ ನೋಡಿ ಎಂದು ಕುಕ್ಕೆ ಸುಬ್ರಹ್ಮಣ್ಯ ಠಾಣೆಯ ಅವ್ಯವಸ್ಥೆ ಕಂಡು ಗೃಹ ಸಚಿವ ಆರಗ ಜ್ಞಾನೇಂದ್ರ ಬೇಸರ ವ್ಯಕ್ತಪಡಿಸಿದರು.
Kshetra Samachara
27/06/2022 01:24 pm