ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಸಂಚಾರ ಉಪ ವಿಭಾಗದ ನೂತನ ಎಸಿಪಿಯಾಗಿ ಗೀತಾ ಕುಲಕರ್ಣಿ ಅಧಿಕಾರ ಸ್ವೀಕಾರ

ಮಂಗಳೂರು: ನಗರದ ಸಂಚಾರ ಉಪ ವಿಭಾಗದ ನೂತನ ಎಸಿಪಿಯಾಗಿ ಗೀತಾ ಕುಲಕರ್ಣಿಯವರು ಇಂದು ಅಧಿಕಾರ ಸ್ವೀಕರಿಸಿದರು.

ಸಿಐಡಿ ವಿಭಾಗದಲ್ಲಿದ್ದ ಗೀತಾ ಕುಲಕರ್ಣಿಯವರಿಗೆ ಇಂದು ನಿರ್ಗಮಿತ ಎಸಿಪಿ ಟ್ರಾಫಿಕ್ ನಟರಾಜ್ ಅವರು ಅಧಿಕಾರ ಹಸ್ತಾಂತರಿಸಿದರು. ಆ ಬಳಿಕ ಅವರು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಅವರನ್ನು ಭೇಟಿಯಾದರು. ಈ ಹಿಂದೆ ಸಂಚಾರ ಉಪ ವಿಭಾಗದ ಎಸಿಪಿಯಾಗಿದ್ದ ಎಂ.ಎ.ನಟರಾಜ್ ಸಿಐಡಿ ವಿಭಾಗಕ್ಕೆ ವರ್ಗಾವಣೆಗೊಂಡಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

23/05/2022 05:17 pm

Cinque Terre

5.96 K

Cinque Terre

0