ಉಡುಪಿ: ಹಿಜಾಬ್ ವಿಚಾರದಲ್ಲಿ ಹೈ ಕೋರ್ಟ್ ಮೆಟ್ಟಿಲೇರಿದ್ದ ವಿದ್ಯಾರ್ಥಿನಿಯರು ಇವತ್ತು ಉಡುಪಿಯಲ್ಲಿ ಪ್ರೆಸ್ ಮೀಟ್ ಮಾಡಿದ್ದಾರೆ.
ನಮಗೆ ನ್ಯಾಯಾಲಯದ ಮೇಲೆ ಬಹಳ ನಿರೀಕ್ಷೆ ಇತ್ತು.ವ್ಯವಸ್ಥೆ ಮೇಲೆ ಬಹಳ ಭರವಸೆ ಇತ್ತು.ಆದರೆ ತೀರ್ಪು ಹಿಜಾಬ್ ವಿರುದ್ಧ ಬಂದಿದೆ. ಎಲ್ಲ ಮುಸ್ಲಿಂ ಮಹಿಳೆಯರು ತಲೆ ಮತ್ತು ಎದೆ ಮುಚ್ಚಬೇಕು ಎಂದು ಇದೆ.ಕುರಾನ್ ನಲ್ಲಿ ದೇಹವನ್ನು ಮುಚ್ಚಬೇಕೆಂಬ ಉಲ್ಲೇಖ ಇದೆ.
ಹಿಜಾಬ್ ಅವಶ್ಯಕತೆ ಇಲ್ಲದಿದ್ದರೆ ನಾವು ಹಿಜಬ್ ತೊಡುತ್ತಿರಲಿಲ್ಲ. ನಮಗೆ ನ್ಯಾಯ ಸಿಗುವ ಭರವಸೆ ಇತ್ತು, ಆದರೆ ಸಿಗಲಿಲ್ಲ.ನಾವು ಹಿಜಾಬ್ ತೆಗೆದು ಕ್ಲಾಸ್ ಒಳಗೆ ಹೋಗಲ್ಲ.ನಾವು ಕಾನೂನು ರೀತಿಯಲ್ಲಿ ಹೋರಾಟ ಮಾಡುತ್ತೇವೆ.ಹಿಜಾಬ್ ಮುಖ್ಯ ಅಲ್ಲವಾದರೆ ನಾವು ಹೋರಾಟ ಮಾಡುತ್ತಿರಲಿಲ್ಲ.ನಮಗೆ ಎಜುಕೇಶನ್ ಬೇಕು, ಹಿಜಾಬ್ ಕೂಡಾ ಬೇಕು ಎಂದು ಕೋರ್ಟ್ ಮೆಟ್ಟಿಲೇರಿದ್ದ ವಿದ್ಯಾರ್ಥಿನಿಯರ ಪೈಕಿ ಆಲಿಯಾ ಅಸಾದಿ ಪ್ರತಿಕ್ರಿಯೆ ನೀಡಿದ್ದಾರೆ.
ಹಿಜಾಬ್ ಗಾಗಿ ನಾವು ಕಾಂಪ್ರಮೈಸ್ ಮಾಡುವುದಿಲ್ಲ. ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ ಎಂದು
ಉಡುಪಿಯ ಪ್ರೆಸ್ ಕ್ಲಬ್ ನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ವಿದ್ಯಾರ್ಥಿನಿ ಯರು ಹೇಳಿದ್ದಾರೆ. ನಾವು ಹೈಕೋರ್ಟ್ ಗೆ ಹಿಜಬ್ ಗಾಗಿ ಹೋದೆವು.ನಮ್ಮ ನಿರೀಕ್ಷೆ ವಿರುದ್ಧ ತೀರ್ಪು ಬಂದಿದೆ.ಸರಕಾರದ ವಸ್ತ್ರಸಂಹಿತೆ ಆದೇಶವನ್ನೇ ತೀರ್ಪಿನಲ್ಲಿ ಪ್ರಕಟಿಸಲಾಗಿದೆ.
ಎಂದು ಆಲಿಯಾ ಅಸಾದಿ ಎಂಬ ವಿದ್ಯಾರ್ಥಿನಿ ಹೇಳಿದ್ದಾರೆ.
ಸರಕಾರದ ಮಧ್ಯಂತರ ಆದೇಶದ ಮೂಲಕ ಕೋರ್ಟ್ ಮೇಲೆ ಪ್ರೆಶರ್ ಹಾಕಲಾಗಿದೆ ಎಂದು ಹೇಳಿದ ಆಕೆ, ರಾಜ್ಯ ಸರಕಾರ ಕೋರ್ಟ್ ತೀರ್ಪಿನ ಮೇಲೆ ಹಸ್ತಕ್ಷೇಪ ಮಾಡಿದೆ. ರಾಜ್ಯ ಸರಕಾರದಿಂದ ಕೋರ್ಟ್ ಮೇಲೆ ಒತ್ತಡ ಇದೆ.ಒತ್ತಡ ಇದ್ದದ್ದಕ್ಕೆ ಇಂದು ಹಿಜಾಬ್ ವಿರುದ್ಧ ತೀರ್ಪು ಬಂದಿದೆ ಎಂದು ಹೇಳಿದ್ದಾರೆ.
PublicNext
15/03/2022 05:33 pm