ಉಡುಪಿ: ಇವತ್ತು ರಾಜ್ಯಾದ್ಯಂತ ಪ್ರೌಢ ಶಾಲೆಗಳು ಆರಂಭಗೊಳ್ಳುತ್ತಿವೆ.ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಶಾಲೆ ಕಾಲೇಜು ಆವರಣದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.14 ರಿಂದ 19 ರವರೆಗೆ ಸೆಕ್ಷನ್ ಜಾರಿ ಮಾಡಿ ಡಿ.ಸಿ ಆದೇಶ ಹೊರಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಶಾಲೆ ಕಾಲೇಜು ಆವರಣದಲ್ಲಿ ಪೊಲೀಸ್ ಭದ್ರತೆ ಬಿಗಿ ಗೊಳಿಸಲಾಗಿದೆ.ಮುಖ್ಯವಾಗಿ ಉಡುಪಿಯ ಸರಕಾರಿ ಪಿಯು ಕಾಲೇಜು ಆವರಣದಲ್ಲಿ ಭದ್ರತೆ ಬಿಗಿ ಗೊಳಿಸಲಾಗಿದ್ದು ,ಹೊರಗಿನವರು ಕಾಲೇಜಿನ ಒಳಗೆ ಬಾರದಂತೆ ಗೇಟ್ ಬಂದ್ ಮಾಡಲಾಗಿದೆ.
Kshetra Samachara
14/02/2022 11:15 am