ಉಡುಪಿ: ನಾಳೆಯಿಂದ ಕಾಲೇಜುಗಳು ಪುನರಾರಂಭ ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇವತ್ತು ಜಿಲ್ಲಾಧಿಕಾರಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರ ಜೊತೆಗೆ ಶಾಂತಿ ಸಭೆ ನಡೆಯಿತು.
ಶಾಂತಿ ಸಭೆ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಕೂರ್ಮಾರಾವ್, ಎಲ್ಲರೂ ಕೂಡ ಶಾಂತಿಪಾಲನೆ ಮಾಡಬೇಕು. ಹೈಕೋರ್ಟ್ ಆದೇಶವನ್ನು ಎಲ್ಲರೂ ಪಾಲಿಸಬೇಕು.ಈ ಹಿನ್ನಲೆಯಲ್ಲಿ ಇಂದು ಶಾಂತಿ ಸಭೆ ನಡೆಸಿದ್ದೇವೆ.ಎಲ್ಲ ಸಂಘಟನೆಗಳ ಮುಖಂಡರ ಜೊತೆ ಚರ್ಚೆ ಮಾಡಿದ್ದೇವೆ.
ಜಿಲ್ಲೆಯಲ್ಲಿ ಶಾಂತಿಪಾಲನೆ ಆಗುವುದು ತುಂಬಾ ಮುಖ್ಯ.ಹೈಕೋರ್ಟ್ ನೀಡಿರುವ ಆದೇಶದಂತೆ ಎಲ್ಲರೂ ಸರಿಯಾದ ಸಮಯಕ್ಕೆ ಕಾಲೇಜಿಗೆ ಹಾಜರಾಗಬೇಕು. ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ವಿವಿಧ ಸಂಘಟನೆಗಳು ಕೂಡ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಂತಿ ಪಾಲನೆಗೆ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.
ಇವತ್ತು ಜಿಲ್ಲೆಯ ಬಹುತೇಕ ಕಾಲೇಜುಗಳಲ್ಲೂ ಕೂಡ ಸಭೆ ಕರೆಯಲಾಗಿದ್ದು ಹೈಕೋರ್ಟ್ ಆದೇಶ ಅನುಸರಿಸುವುದರ ಜೊತೆಗೆ ಶಾಂತಿ ಪಾಲನೆ ಮಾಡಬೇಕು ಎಂದು ಪೋಷಕರಲ್ಲಿ ಮನವಿ ಮಾಡಿದ್ದೇವೆ ಎಂದು ಹೇಳಿದರು.
Kshetra Samachara
15/02/2022 09:32 pm