ಉಡುಪಿ: ಆಯುಧ ಪೂಜೆ ಹಿನ್ನೆಲೆಯಲ್ಲಿ ಉಡುಪಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಸಾಂಪ್ರದಾಯಿಕ ಹೊಸ ಬಟ್ಟೆ ತೊಟ್ಟು ಪೂಜೆ ಮಾಡಿ ಸಂಭ್ರಮಿಸಿದರು. ಸದಾ ಕಾಲ ಟ್ರಾಫಿಕ್ ನಿವಾರಣೆಯ ಗೊಂದಲ, ವಾಹನಗಳ ಧೂಳು, ಹೊಗೆಯ ನಡುವೆ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಪೊಲೀಸ್ ಸಿಬ್ಬಂದಿಗಳು ಇಂದು ವಿಶೇಷವಾಗಿ ಸಾಂಪ್ರದಾಯಿಕ ಬಟ್ಟೆಯಲ್ಲಿ ಮಿಂಚಿದರು. ಪೊಲೀಸ್ ಅಧಿಕಾರಿಗಳು ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರೆ, ಪೊಲೀಸ್ ಠಾಣೆಗಳು ವಿವಿಧ ಅಲಂಕಾರದಿಂದ ಕಂಗೊಳಿಸಿದವು. ಆಯುಧ ಪೂಜೆ ಹಿನ್ನಲೆಯಲ್ಲಿ ವಿಶೇಷ ಹೋಮ ಹವನಗಳು ನಡೆದವು. ಪುರೋಹಿತರು ವಿಧಿವತ್ತಾಗಿ ಆಯುಧ ಪೂಜೆ ಹಾಗೂ ವಾಹನ ಪೂಜೆ ನಡೆಸಿದರು.
Kshetra Samachara
14/10/2021 07:19 pm