ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಹಳೆ ವಿದ್ಯಾರ್ಥಿ ವಕೀಲರ ಅಪೂರ್ವ ಸಮ್ಮಿಲನ: 'ಸವಿ ಸವಿ ನೆನಪು ಸಾವಿರ ನೆನಪು'

ಉಡುಪಿ: ಹಳೆ ವಿದ್ಯಾರ್ಥಿಗಳೆಲ್ಲ ದಶಕಗಳ ಬಳಿಕ ಸೇರಿದರೆ ಅದರ ರೋಮಾಂಚನವೇ ಬೇರೆ. ಉಡುಪಿಯ ವೈಕುಂಠ ಬಾಳಿಗಾ ಲಾ ಕಾಲೇಜ್ ಇಂತಹದ್ದೊಂದು ಅಪೂರ್ವ ಸಮ್ಮಿಲನಕ್ಕೆ ಸಾಕ್ಷಿಯಾಗಿತ್ತು.

ಇಲ್ಲಿನ ಹಳೆ ವಿದ್ಯಾರ್ಥಿ ಸಂಘದಿಂದ old students day ಮತ್ತು "ಸಮ್ಮಿಲನ" ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದೊಂದು ಸಮಾರಂಭ ಎನ್ನುವುದಕ್ಕಿಂತ ಅಪರೂಪದ ಸಮ್ಮಿಲನ ಆಗಿತ್ತು. ಕಾರ್ಯಕ್ರಮವನ್ನು ಹೈಕೋರ್ಟ್ ನ್ಯಾಯಮೂರ್ತಿ ಎಂ.ಜಿ. ಉಮಾ ಉದ್ಘಾಟಿಸಿದರೆ, ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ನಿಖಿಲ್ ಎಸ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

ಉಡುಪಿ ವಕೀಲರ ಸಂಘದ ಅಧ್ಯಕ್ಷ ಬಿ.ನಾಗರಾಜ್ ಇದೇ ಕಾಲೇಜಿನ ಹಳೆ ವಿದ್ಯಾರ್ಥಿ. ಇವರ ಬ್ಯಾಚ್‌ನ ಅನೇಕ ವಕೀಲರು, ಒಂದು ಕಾಲದ ಕಾಲೇಜ್‌ಮೇಟ್‌ಗಳು, ತಮ್ಮ ಕಾಲೇಜಿನ ಹಳೆ ತುಂಟಾಟದ ನೆನಪುಗಳನ್ನು ಮೆಲುಕು ಹಾಕಿ 'ಸವಿ ಸವಿ ನೆನಪು ಸಾವಿರ ನೆನಪು' ಎಂಬಂತೆ ಸಂಭ್ರಮಿಸಿದರು. ಕರ್ನಾಟಕ ಮಾತ್ರವಲ್ಲದೆ ಕೇರಳ, ತಮಿಳುನಾಡು ಮತ್ತಿತರ ಕಡೆಗಳಲ್ಲಿ ವಕೀಲರಾಗಿ, ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿರುವ ಹಳೆ ವಿದ್ಯಾರ್ಥಿಗಳು ಸಮ್ಮಿಲನ ಕಾರ್ಯಕ್ರಮದಲ್ಲಿ ಸಂಭ್ರಮಿಸಿದರು. ಪಬ್ಲಿಕ್ ನೆಕ್ಸ್ಟ್ ಜೊತೆ ಅವರು ತಮ್ಮ ಖುಷಿಯನ್ನು ಹಂಚಿಕೊಂಡಿದ್ದು ಹೀಗೆ.

Edited By : Shivu K
PublicNext

PublicNext

12/05/2022 09:25 pm

Cinque Terre

61.67 K

Cinque Terre

0

ಸಂಬಂಧಿತ ಸುದ್ದಿ