ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ವೀಕೆಂಡ್ ಕರ್ಫ್ಯೂ ಗೆ ಜನ ಸ್ಪಂದನೆ: ಪೇಟೆ ಬಿಕೋ, ವ್ಯಾಪಾರಕ್ಕೆ ʼಬರʼ

ಕಾಪು: ತಾಲೂಕಿನಲ್ಲಿ ವೀಕೆಂಡ್ ಕರ್ಫ್ಯೂ ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಕಾಪು ಪೇಟೆಯಲ್ಲಿ ಮೆಡಿಕಲ್, ದಿನಸಿ, ಹಣ್ಣು-ತರಕಾರಿ ಅಂಗಡಿಗಳು ಮತ್ತಿತರ ಅಗತ್ಯ ಸೇವೆಗಳ ಅಂಗಡಿ ಹೊರತು ಪಡಿಸಿ, ಉಳಿದೆಲ್ಲ ಅಂಗಡಿ-ಮುಂಗಟ್ಟು ಬಂದ್ ಆಗಿತ್ತು.

ಬಸ್, ರಿಕ್ಷಾ ಸಂಚಾರ ಎಂದಿನಂತಿದ್ದರೂ ಪ್ರಯಾಣಿಕರ ಕೊರತೆ ಎದ್ದು ಕಾಣುತ್ತಿತ್ತು. ಜನ‌ಸಂಚಾರ ವಿರಳವಾಗಿದ್ದರಿಂದ ಪೇಟೆ ಬಿಕೋ ಎನ್ನುತ್ತಿತ್ತು. ತರಕಾರಿ- ಹಣ್ಣು ಹಂಪಲು ವ್ಯಾಪಾರಸ್ಥರಿಗೆ ತಮ್ಮ ಸರಕು ಹಾಳಾಗುವ ಭೀತಿ ಎದುರಾಗಿದೆ. ಪೊಲೀಸರು ಕೊರೊನಾ ನಿಯಮಾವಳಿ ಪಾಲಿಸಲು ನಾನಾ ಕಡೆ ಜನರನ್ನು ಎಚ್ಚರಿಸುತ್ತಿರುವುದು ಕಂಡು ಬರುತ್ತಿತ್ತು.

Edited By : Shivu K
Kshetra Samachara

Kshetra Samachara

09/01/2022 04:57 pm

Cinque Terre

14.61 K

Cinque Terre

0

ಸಂಬಂಧಿತ ಸುದ್ದಿ