ಮಂಗಳೂರು: ಓಮಿಕ್ರಾನ್ ಸೋಂಕಿನ ಭೀತಿಯಿಂದ ರಾಜ್ಯ ಸರಕಾರ ಆದೇಶಿಸಿರುವ ರಾತ್ರಿ ಕರ್ಫ್ಯೂ ಹಿನ್ನೆಲೆಯಲ್ಲಿ ಇಂದಿನಿಂದ ಜ.7ರವರೆಗೆ ರಾತ್ರಿ ದ.ಕ.ಜಿಲ್ಲೆ ಸಂಪೂರ್ಣ ನಿಶಬ್ಧಗೊಳ್ಳಲಿದೆ. ಈ ಸಂದರ್ಭ ರಾತ್ರಿ 10ರಿಂದ ಬೆಳಗ್ಗೆ 5ಗಂಟೆಯವರೆಗೆ ತುರ್ತು ಅವಶ್ಯಕತೆಗಳನ್ನು ಹೊರತು ಪಡಿಸಿ ಅನವಶ್ಯಕ ಓಡಾಟಕ್ಕೆ ಅವಕಾಶವಿಲ್ಲ.
ಅಲ್ಲದೆ ಹೊಟೇಲ್, ಪಬ್, ರೆಸ್ಟೋರೆಂಟ್ ಗಳು 50% ಜನರಿಗೆ ಮಾತ್ರ ಅವಕಾಶ ಇರಲಿದೆ. ಅಲ್ಲದೆ ಸಿಬ್ಬಂದಿಯು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆಯದಿರಬೇಕು ಹಾಗೂ ಆರ್ ಟಿಪಿಆರ್ ನೆಗೆಟಿವ್ ವರದಿ ಕಡ್ಡಾಯವಾಗಿ ಹೊಂದಿರಬೇಕು ಎಂದು ಆದೇಶಿಸಲಾಗಿದೆ.
ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಮಾತನಾಡಿ, ಕಾರ್ಯಕ್ರಮಗಳಲ್ಲಿ, ಮದುವೆ ಸಮಾರಂಭಗಳಲ್ಲಿ 300 ಕ್ಕೂ ಅಧಿಕ ಜನಸಂಖ್ಯೆ ಸೇರುವಂತಿಲ್ಲ. ಗಡಿಭಾಗಗಳಲ್ಲಿ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಲಾಗುತ್ತದೆ. ಮಂಗಳೂರು ಹಾಗೂ ದ.ಕ.ಜಿಲ್ಲೆಯಾದ್ಯಂತ 36 ಚೆಕ್ ಪೋಸ್ಟ್ ಗಳಲ್ಲಿ ಬಿಗಿ ಬಂದೋಬಸ್ತು ವ್ಯವಸ್ಥೆ ಮಾಡಿ ಅನಗತ್ಯ ಸಂಚಾರಕ್ಕೆ ಕಡಿವಾಣ ಹಾಕಲಾಗುತ್ತದೆ ಎಂದು ಹೇಳಿದರು.
Kshetra Samachara
28/12/2021 05:46 pm