ಪುತ್ತೂರು: ಉದ್ಯಮ ದೈತ್ಯ ರಿಲಯನ್ಸ್ ಕಂಪೆನಿಯ ಕಣ್ಣು ದ.ಕ.ಜಿಲ್ಲೆಯ ಪುತ್ತೂರಿನ ಪ್ರಸಿದ್ಧ ತಂಪು ಪಾನೀಯ ಕಂಪೆನಿಯ ಮೇಲೆ ಬಿದ್ದಿದೆ. ಆದರೆ ಎಸ್ ಜಿ ಕಂಪೆನಿಯ ತಮ್ಮ 'ಬಿಂದು' ಬ್ರ್ಯಾಂಡ್ ಅನ್ನು ಬೆಳೆಸುವ ಕನಸಿದೆಯೇ ಹೊರತು ಮಾರಾಟ ಮಾಡುವ ಉದ್ದೇಶವಿಲ್ಲವೆಂದು ನೇರವಾಗಿ ಹೇಳಿ ಆಫರ್ ಅನ್ನು ನಯವಾಗಿ ತಿರಸ್ಕರಿಸಿದೆ.
ಈ ಬಗ್ಗೆ ಎಸ್ ಜಿ ಕಾರ್ಪೋರೇಟ್ಸ್ ಆಡಳಿತ ನಿರ್ದೇಶಕ ಸತ್ಯಶಂಕರ್ ಭಟ್ ಸ್ಪಷ್ಟನೆ ನೀಡಿ, ಈ ಹಿಂದೆಯೂ ವಿಪ್ರೊ, ಕೋಕೋ ಕೋಲಾ ಸೇರಿದಂತೆ ಹಲವಾರು ಅಂತರಾಷ್ಟ್ರೀಯ ಕಂಪೆನಿಗಳು ನಮ್ಮ 'ಬಿಂದು' ಬ್ರ್ಯಾಂಡ್ ಅನ್ನು ಖರೀದಿಸುವ ಆಸಕ್ತಿ ತೋರಿಸಿತ್ತು. ಇದೀಗ ರಿಲಯನ್ಸ್ ಕಂಪೆನಿಯೂ ಬಹು ದೊಡ್ಡ ಆಫರ್ ಅನ್ನು ನೀಡಿದೆ. ಉದ್ಯಮ ವಲಯದಲ್ಲಿ ಇವೆಲ್ಲಾ ಸಾಮಾನ್ಯ ವಿಚಾರ. ಆದರೆ ನಾವು ಯಾವುದೇ ಕಾರಣಕ್ಕೂ ಕಂಪೆನಿಯನ್ನು ಮಾರಾಟ ಮಾಡುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಆಟೋ ಚಾಲಕರಾಗಿದ್ದ ಸತ್ಯಶಂಕರ್ ಭಟ್ ಪುತ್ತೂರಿನ ಕುಗ್ರಾಮದಲ್ಲಿ ಸ್ವಂತ ಉದ್ದಿಮೆ ಪ್ರಾರಂಭಿಸಿ, ಬಿಂದು ಕುಡಿಯುವ ನೀರು ಘಟಕವನ್ನು ಆರಂಭಿಸಿ ಯಶಸ್ವಿ ಯಾಗಿದ್ದರು. ಬೆರಳೆಣಿಕೆಯ ಕಾರ್ಮಿಕರಿಂದ ಆರಂಭವಾಗಿರುವ ಬಿಂದು ಉದ್ಯಮ ಇಂದು 500 ಕೋಟಿ ರೂ. ವಾರ್ಷಿಕ ವ್ಯವಹಾರ ನಡೆಸುತ್ತಿದೆ. 2025ರ ವೇಳೆಗೆ 1 ಸಾವಿರ ಕೋಟಿ ರೂ. ವಾರ್ಷಿಕ ವ್ಯವಹಾರವನ್ನು ಮಾಡುವ ಗುರಿಯನ್ನು ಹೊಂದಿದೆ. ದಕ್ಷಿಣ ಭಾರತದಲ್ಲಿ ಮಾರುಕಟ್ಟೆ ಹೊಂದಿರುವ ಬಿಂದು ಗ್ರೂಪ್ ಅಮೇರಿಕಾ, ಗಲ್ಫ್ ರಾಷ್ಟ್ರಗಳಲ್ಲೂ ಮಾರುಕಟ್ಟೆ ಹೊಂದಿದೆ.
Kshetra Samachara
07/09/2022 08:11 pm