ಮಂಗಳೂರು: ದ.ಕ. ಜಿಲ್ಲೆ ಬೆಳ್ತಂಗಡಿ ತಾಲೂಕಿನ ಕೌಕ್ರಾಡಿಯಲ್ಲಿ ನಡೆದ ದರೋಡೆ ಪ್ರಕರಣದಲ್ಲಿ 7 ರಿಂದ 8 ಮಂದಿ ಮುಸುಕುಧಾರಿಗಳು ಭಾಗವಹಿಸಿದ್ದು, ತನಿಖೆ ಚುರುಕಿನಿಂದ ಸಾಗುತ್ತಿದೆ ಎಂದು ಎಸ್ಪಿ ಲಕ್ಷ್ಮಿ ಪ್ರಸಾದ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಚೂರಿ ಇರಿತಕ್ಕೊಳಗಾದ ಗೀತಾ ಶೆಟ್ಟಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಪ್ಪಿನಂಗಡಿ ಠಾಣೆಯ ಇನ್ಸ್ ಪೆಕ್ಟರ್ ನೇತೃತ್ವದಲ್ಲಿ 2 ತಂಡ ರಚಿಸಲಾಗಿದೆ. ಜೈಪುರ ಹಾಗೂ ಕಾರ್ಕಳದಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಾಮ್ಯತೆ ಇರುವುದರಿಂದ ಕೌಕ್ರಾಡಿಯಲ್ಲಿ ದರೋಡೆಯನ್ನು ಅದೇ ತಂಡ ನಡೆಸಿರುವ ಶಂಕೆ ಇದ್ದು, ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದರು.
Kshetra Samachara
21/12/2020 05:43 pm