ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರೈತರ ಚಳವಳಿಗೆ ಬಂದರು ಕಾರ್ಮಿಕರ ಸಾಥ್

ಮಂಗಳೂರು: ರೈತರ ಚಳವಳಿ ಬೆಂಬಲಿಸಿ ಹಳೆ ಬಂದರು ಸಗಟು ಮಾರುಕಟ್ಟೆಯ ಹಮಾಲಿ ಕಾರ್ಮಿಕರಿಂದ ಹಳೆ ಬಂದರು ಕಾರ್ಮಿಕರ ಕಟ್ಟೆ ಬಳಿ ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ರೈತರ ಭಾರತ್ ಬಂದ್ ಬೆಂಬಲಿಸಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಮಾತನಾಡಿದ ಡಿವೈಎಫ್ಐ ಜಿಲ್ಲಾಧ್ಯಕ್ಷ ಮತ್ತು ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಕೆ. ಇಮ್ತಿಯಾಝ್, ಕೇಂದ್ರ ಸರಕಾರ ರೈತರ ಹೋರಾಟವನ್ನು ಲಘುವಾಗಿ ಪರಿಗಣಿಸಿದರೆ ಸರಕಾರ ಕಠಿಣ ಪರಿಸ್ಥಿತಿ ಎದುರಿಸಬೇಕಾದೀತು. ಕೃಷಿ ಪ್ರಧಾನ ಭಾರತದಲ್ಲಿ ಕಾರ್ಪೊರೇಟ್ ಕಂಪೆನಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ರೈತರನ್ನು ದಮನಿಸುವ ನೀತಿ ಜಾರಿಗೆ ತರುತ್ತಿವೆ. ಜನರನ್ನು ಲಾಕ್ ಡೌನ್ ಹೆಸರಲ್ಲಿ ಬಂಧನದಲ್ಲಿಟ್ಟು ಭೂ ಸುಧಾರಣೆ, ವಿದ್ಯುತ್ ಮತ್ತು ಎಪಿಎಂಸಿ ಕಾಯಿದೆಗಳನ್ನು ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದಿರುವುದು ಜನತೆಗೆ ಮಾಡಿದ ಘೋರ ಅನ್ಯಾಯ ಎಂದರು.

ಸಂಘದ ಮುಖಂಡರಾದ ಫಾರೂಕ್ ಉಳ್ಳಾಲ, ಚಂದ್ರಹಾಸ್ ಕುತ್ತಾರ್, ಹರೀಶ್ ಕೆರೆಬೈಲ್, ಮಜೀದ್ ಉಳ್ಳಾಲ್, ಸಿದ್ದಿಕ್ ಬೆಂಗರೆ, ಮೊಯಿದಿನ್ ಕಲ್ಕಟ್ಟೆ, ಡಿವೈಎಫ್ಐ ಮುಖಂಡರಾದ ಎ.ಬಿ. ನೌಶಾದ್, ಪಿ.ಜಿ. ರಫೀಕ್, ಅಸ್ಲಾಂ ಬೆಂಗ್ರೆ ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

08/12/2020 07:20 pm

Cinque Terre

8.35 K

Cinque Terre

0

ಸಂಬಂಧಿತ ಸುದ್ದಿ