ಉಡುಪಿ: ಪುತ್ರಿಯರಿಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿದ್ದ ತಂದೆಗೆ ಜೀವಾವಧಿ ಶಿಕ್ಷೆಯಾಗಿದೆ.
ಉಡುಪಿ ಜಿಲ್ಲೆಯ ಮಟ್ಟಿಗೆ ತುಂಬಾ ಅಪರೂಪದ ಕೋರ್ಟ್ ಆದೇಶ ಇದು. ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೊ ತ್ವರಿತ ವಿಶೇಷ ನ್ಯಾಯಾಲಯದ ಈ ಆದೇಶದಿಂದ ಕಾಮುಕರಿಗೆ ಕಠಿಣ ಸಂದೇಶ ರವಾನೆಯಾಗಿರುವುದು ನಿಜ.
ಇಂದು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಭಾಕರ ಆಚಾರ್, ಈ ಆದೇಶ ಕಾಮುಕರಿಗೆ ಒಂದು ಎಚ್ಚರಿಕೆ ನೀಡಿದಂತಾಗಿದೆ. ಜಿಲ್ಲೆಯಲ್ಲಿ ಯಾರೇ ಆಗಿರಲಿ ಮಕ್ಕಳಿಗೆ ಯಾವುದೇ ರೀತಿಯ ಕಿರುಕುಳ ನೀಡುವುದನ್ನು ಸಹಿಸುವುದಿಲ್ಲ. ಈ ಕಾಮುಕ ತಂದೆಯ ಪ್ರಕರಣವನ್ನು ಭೇದಿಸಿ ಆರೋಪಿಗೆ ಕಠಿಣ ಶಿಕ್ಷೆ ಆಗುವಲ್ಲಿ ನಮ್ಮ ಇಲಾಖೆಯ ಸಿಬ್ಬಂದಿ ಶ್ರಮ ವಹಿಸಿದ್ದಾರೆ. ಈ ಆದೇಶ ನೀಡಿರುವ ನ್ಯಾಯಾಧೀಶರಿಗೂ, ಆರೋಪಿಗೆ ಶಿಕ್ಷೆ ಆಗಲು ಕಾರಣರಾದ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
Kshetra Samachara
01/12/2020 04:55 pm