ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು : ನೀರಲ್ಲಿ ಕೊಚ್ಚಿ ಹೋದ ಬಾಲಕಿಗಾಗಿ ಪೊಲೀಸ್,ಅಗ್ನಿಶಾಮಕ,ಸ್ಥಳೀಯ ಮುಳುಗು ತಜ್ಞರಿಂದ ತೀವ್ರ ಶೋಧ!

ಬೈಂದೂರು: ತಾಲೂಕಿನ ಕಾಲ್ತೋಡು ಗ್ರಾಮದ ಬೀಜಮಕ್ಕಿ ಎಂಬಲ್ಲಿ ಕಾಲುಸಂಕ ದಾಟುವಾಗ ನೀರುಪಾಲಾದ ಬಾಲಕಿಯ ಶೋಧ ಕಾರ್ಯ ಮುಂದುವರೆದಿದೆ.

ನೀರಲ್ಲಿ ಕೊಚ್ಚಿ ಹೋದ ಬಾಲಕಿಗಾಗಿ ಪೊಲೀಸ್,ಅಗ್ನಿಶಾಮಕ,ಸ್ಥಳೀಯ ಮುಳುಗು ತಜ್ಞರು ತೀವ್ರ ಶೋಧ ನಡೆಸುತ್ತಿದ್ದಾರೆ.ನಿನ್ನೆ ನಾಲ್ಕು ಗಂಟೆಯಿಂದ ಸತತ ಶೋಧಕಾರ್ಯ ನಡೆಸಿದರೂ ಬಾಲಕಿಯ ಸುಳಿವು ಪತ್ತೆಯಾಗಿಲ್ಲ.ಇದೀಗ ಸ್ಥಳಕ್ಕೆ ಡಿಸಿ ಕೂರ್ಮಾ ರಾವ್ ,ಕುಂದಾಪುರ ಎಸಿ ಮತ್ತು ತಹಶೀಲ್ದಾರ್ ಭೇಟಿ ಕೊಟ್ಟಿದ್ದಾರೆ.

ಬಾಲಕಿ ಬಿದ್ದಿರುವ ಹೊಳೆಯಲ್ಲಿ ನೀರಿನ ಮಟ್ಟ ಜಾಸ್ತಿ ಇದೆ. ಕಳೆದ ಕೆಲ ದಿನಗಳಿಂದ ಸತತ ಮಳೆಯಾಗಿರುವುದರಿಂದ ಹೊಳೆ ರಭಸವಾಗಿ ಹರಿಯುತ್ತಿದೆ.ಎರಡೂ ಕಡೆ ಗಿಡಗಂಟಿಗಳು ಇರುವುದರಿಂದ ಪತ್ತೆ ಕಾರ್ಯ ಸವಾಲಾಗಿ ಪರಿಣಮಿಸಿದೆ. ಸ್ಥಳದಲ್ಲಿ ಗ್ರಾಮಸ್ಥರು ಪುಟ್ಟ ಮಗುವಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತಿದ್ದು ಇಡೀ ಗ್ರಾಮವೇ ಶೋಕದಲ್ಲಿ ಮುಳುಗಿದೆ.

Edited By :
Kshetra Samachara

Kshetra Samachara

09/08/2022 04:28 pm

Cinque Terre

6.72 K

Cinque Terre

0

ಸಂಬಂಧಿತ ಸುದ್ದಿ