ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಹೆದ್ದಾರಿ ಬಳಿ ಮಗುಚಿದ ಕಾರು, ಚಾಲಕ ಪಾರು

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ.ರೋಡ್ ನ ಸೇತುವೆ ಬಳಿ ಪಾಣೆ ಮಂಗಳೂರಿಗೆ ಹೋಗುವ ಜಾಗದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಬದಿ ಹೊಂಡಕ್ಕೆ ಉರುಳಿಬಿದ್ದಿದೆ. ಸ್ಥಳೀಯ ನಿವಾಸಿ ಕುಶಾಂತ್ ಎಂಬವರು ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಬಿದ್ದಿದ್ದು, ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಆಳವಾದ ಹೊಂಡಕ್ಕೆ ಕಾರು ಉರುಳಿಬಿದ್ದಿದೆ. ಬಳಿಕ ಗಜಲಕ್ಷ್ಮೀ ಕ್ರೇನ್ ಮೂಲಕ ಕಾರನ್ನು ಮೇಲಕ್ಕೆತ್ತಲಾಯಿತು. ಈ ಸಂದರ್ಭ ಬೆಳಗ್ಗಿನ ಹೊತ್ತಿನಲ್ಲಿ ಕಾರನ್ನು ನೋಡಲು ಜನ ಜಮಾಯಿಸಿದ್ದು, ಪೊಲೀಸರು ಆಗಮಿಸಿ ಪರಿಸ್ಥಿತಿ ನಿಭಾಯಿಸಿದರು.

Edited By :
Kshetra Samachara

Kshetra Samachara

20/07/2022 12:30 pm

Cinque Terre

9.19 K

Cinque Terre

0

ಸಂಬಂಧಿತ ಸುದ್ದಿ