ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಸಂತೆಕಟ್ಟೆಯಲ್ಲಿ ಎಲ್ಲೆಂದರಲ್ಲಿ ಮೀನು ಮಾರಾಟ; ಸ್ಥಳೀಯ ನಿವಾಸಿಗಳಿಂದ ಆಕ್ರೋಶ

ಉಡುಪಿ: ವಾಣಿಜ್ಯ ಮತ್ತು ಜನವಸತಿ ಕಟ್ಟಡದ ಎದುರುಗಡೆ ಅನಧಿಕೃತವಾಗಿ ಮೀನು ಮಾರಾಟ ಮಾಡುವುದನ್ನು ಕಟ್ಟಡದ ನಿವಾಸಿಗಳು ತೀವ್ರವಾಗಿ ವಿರೋಧಿಸಿದ್ದಾರೆ. ಉಡುಪಿಯ ಸಂತೆಕಟ್ಟೆ ಪರಿಸರದಲ್ಲಿರುವ ಬಹುಮಹಡಿ ಕಟ್ಟಡದ ಎದುರುಗಡೆ ಹಲವಾರು ಮಂದಿ ಮಹಿಳೆಯರು ಮೀನು ಮಾರಾಟ ನಡೆಸುತ್ತಿದ್ದಾರೆ. ಇದರಿಂದಾಗಿ ಕಟ್ಟಡಕ್ಕೆ ಬರುವ ನಿವಾಸಿಗಳು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತಿದ್ದಾರೆ.

ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿಯ ಬದಿ ಒಂದು ಸುಸಜ್ಜಿತ ಮೀನು ಮಾರಾಟ ಕೇಂದ್ರವನ್ನು ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ 2015 ರಲ್ಲಿ ನಿರ್ಮಿಸಿ ಉದ್ಘಾಟಿಸಲಾಗಿತ್ತು. ಆದರೆ, ಈ ಮೀನು ಮಾರುಕಟ್ಟೆಯಲ್ಲಿ ನೀರಿನ ಸಮಸ್ಯೆಯಿಂದಾಗಿ ಕ್ರಮೇಣ ಇಲ್ಲಿ ಮೀನು ಮಾರಾಟ ಮಾಡುವುದು ನಿಂತೇ ಹೋಗಿದೆ.

ಕಳೆದ ಹಲವಾರು ತಿಂಗಳುಗಳಿಂದ ಈ ಕಟ್ಟಡ ಬಂದ್ ಆಗಿಯೇ ಇದೆ. ಈ ಕುರಿತು ಮಾತನಾಡಿದ ಇಲ್ಲಿನ ನಿವಾಸಿಗಳಾದ ಸೀಮಾ ಕ್ವಾಡ್ರಸ್ ಅವರು "ಇಲ್ಲಿನ ಜನವಸತಿ ಪ್ರದೇಶದ ಎದುರಿನಲ್ಲಿ ಮೀನು ಮಾರಾಟ ಮಾಡುವುದು ಸರಿಯಲ್ಲ. ಸಂಜೆ 8:30 ತನಕ ಇಲ್ಲಿ ಮೀನಿನ ವ್ಯಾಪಾರ ನಡೆಯುತ್ತದೆ. ಇದರಿಂದಾಗಿ ಸಂಜೆ ವೇಳೆ ಪರಿಸರದಲ್ಲಿ ಕೆಟ್ಟ ವಾಸನೆ ಹರಡುತ್ತದೆ. ಸಂಜೆ ಸಮಯ ಹಲವಾರು ಮಂದಿ ಇಲ್ಲಿಗೆ ಮೀನು ಖರೀದಿಗೆ ಬರುತ್ತಾರೆ. ಇದರಿಂದಾಗಿ ಸ್ಥಳದಲ್ಲಿ ಕಟ್ಟಡಕ್ಕೆ ಬರುವವರಿಗೆ ತಮ್ಮ ವಾಹನಗಳನ್ನು ತರಲು ಕೂಡ ಅನಾನುಕೂಲವಾಗುತ್ತಿದೆ" ಎಂದು ದೂರಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

28/10/2020 09:54 pm

Cinque Terre

29.56 K

Cinque Terre

2

ಸಂಬಂಧಿತ ಸುದ್ದಿ