ಮೂಡುಬಿದಿರೆ: ಇಲ್ಲಿಗೆ ಸಮೀಪದ ನಿಡ್ಡೋಡಿ ಕೊಲತ್ತಾರು ಪದವು ಎಂಬಲ್ಲಿ ವಿದ್ಯುತ್ ಲೈನ್ ಅಳವಡಿಕೆ ಸರ್ವೇಗಾಗಿ ಸ್ಟೇರ್‍ಲೈಟ್ ಕಂಪೆನಿ ಹೆಸರು ಹೇಳಿಕೊಂಡು ಬಂದಿದ್ದ ಬೆಂಗಳೂರು ಮೂಲದ ಕಂಪೆನಿಯವರನ್ನು ಹಿಮ್ಮೆಟ್ಟಿಸಿದ ಘಟನೆ ಭಾನುವಾರ ನಡೆದಿದೆ.
ಮೆಗಾ ವಿದ್ಯುತ್ ಯೋಜನೆಗೆಂದು ನಿಗದಿಯಾಗಿ ಸ್ಥಳೀಯ ಜನತೆಯ ತೀವ್ರ ವಿರೋಧದ ಬಳಿಕ ಹಿನ್ನಡೆಯಾಗಿದ್ದ ಈ ಸ್ಥಳದಲ್ಲಿ ಸ್ಥಳೀಯ ಪಂಚಾಯತ್‍ಗೆ ಮಾಹಿತಿ ನೀಡದೇ ಸರ್ವೇಗಾಗಿ ಆಗಮಿಸಿದ್ದವರನ್ನು ಮಾತೃಭೂಮಿ ಸಂರಕ್ಷಣಾ ಸಮಿತಿಯವರು ತಡೆದು ನಿಲ್ಲಿಸಿದಾಗ ಸಮರ್ಪಕ ಮಾಹಿತಿ ನೀಡಲಿಲ್ಲ. ಸರ್ವೇ ಹೆಸರಿನಲ್ಲಿ ಆಗಮಿಸುತ್ತಿರುವ ಯಾರಿಗೇ ಆಗಲಿ ಅವಕಾಶ ನೀಡುವುದಿಲ್ಲ ಎಂದು ವಿರೋಧ ವ್ಯಕ್ತಪಡಿಸಿದಾಗ ಆಗಮಿಸಿದ್ದ ಸರ್ವೇ ತಂಡದವರು ಮರಳಿದರು. ಈ ಬಗ್ಗೆ ಮೂಡುಬಿದಿರೆ ಪೊಲೀಸರಿಗೆ ಮಾಹಿತಿ ನೀಡಲಾಯಿತು.
ಮಾತೃಭೂಮಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಅಲ್ಪೋನ್ಸ್ ಡಿ'ಸೋಜ, ಸಂಚಾಲಕ ಕಿರಣ್ ಮಂಜನಬೈಲು, ಸದಸ್ಯರಾದ ಜನಾರ್ದನ ಗೌಡ, ಅರುಣ ಎಂ.ಆರ್., ರಾಮ ಗೌಡ, ಪುರುಷೋತ್ತಮ ಗೌಡ ಮೊದಲಾದವರು ಸೇರಿದಂತೆ ಸುಮಾರು 100 ಮಂದಿ ಸ್ಥಳದಲ್ಲಿದ್ದರು.
Kshetra Samachara
11/10/2020 10:43 pm