ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ತಂದೆಯ ಗಣೇಶ ಮೂರ್ತಿ ರಚನೆಯ ಕಾಯಕ ಉಳಿಸಲು ಮಗನ ಪ್ರಯತ್ನ

ಕಾಪು: ಗಣೇಶ ಚತುರ್ಥಿಯಂದು ಗಣೇಶ ಮೂರ್ತಿ ಪ್ರತಿಪ್ಠಾಪನೆಯು ಮನೆ, ಊರು-ಕೇರಿಗಳಲ್ಲಿ ಸರ್ವೆ ಸಾಮಾನ್ಯ. ಆದರೆ ಪ್ರತಿ ಮೂರ್ತಿಯ ಹಿಂದೆ ಮೂರ್ತಿ ತಯಾರಕರ ಪರಿಶ್ರಮ ಮತ್ತು ಭಕ್ತಿಯ ಕಾಯಕವಿದೆ. ಗಣೇಶ ಚತುರ್ಥಿಗೆ ಸ್ವಲ್ಪ ದಿನಗಳ ಮೊದಲು ತಮ್ಮ ವೃತ್ತಿಯ ಜೊತೆಗೆ ಬಿಡುವಿನ ಅವಧಿಯಲ್ಲಿ ಇಂತಹುದೇ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ವ್ಯಕ್ತಿ ಪಡುಬಿದ್ರಿಯ ಕುಮಾರ್ ರಾವ್.

ತಂದೆ ದೇವರಾಜ ರಾವ್ ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಳದ ಪರಿಚಾರಕರಾಗಿ ಕಟೀಲು ಮೇಳ ಸೇರಿದಂತೆ ಇತರ ಮೇಳಗಳಲ್ಲಿ ದೇವಿಯ ಪರದೆ, ರಕ್ತ ಬೀಜಾಸುರರ ತಲೆ ಇತ್ಯಾದಿ ವೇಷ ಭೂಷಣದ ತಯಾರಿಯ ಜೊತೆಗೆ ಸುಮಾರು 40 ವರ್ಷಗಳ ಕಾಲ ಮೂರ್ತಿ ತಯಾರಿಕೆಯ ಕಾಯಕದಲ್ಲಿ ತೊಡಗಿಕೊಂಡವರು. ಅವರ ಕಾಲಾನಂತರ ಮಗ ಕುಮಾರ್ ರಾವ್ ದೇವರ ಭಕ್ತಿಯಿಂದ ಗಣಪತಿ ಮೂರ್ತಿ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿದ ಕುಮಾರ್, ತಂದೆ ಮರಣದ ಬಳಿಕ ಪೇಂಟಿಂಗ್ ವೃತ್ತಿಯ ಜೊತೆಗೆ ಮೂರು ನಾಲ್ಕು ವರ್ಷದಿಂದ ಮೂರ್ತಿ ತಯಾರಿಕೆಯ ಕಾಯಕ ಮಾಡುತ್ತಿದ್ದೇನೆ. ಸುಮಾರು 11 ಕಡೆಗಳಿಂದ ಗಣಪತಿ ಮೂರ್ತಿಯ ಬೇಡಿಕೆ ಬಂದಿದೆ. ಮೂರ್ತಿ ತಯಾರಿಕೆಯಿಂದ ಆರ್ಥಿಕವಾಗಿ ಯಾವುದೇ ಲಾಭವಿಲ್ಲ. ದೇವರ ಸೇವೆಯೆಂದು ಈ ಸೇವೆಯನ್ನು ಮಾಡುತ್ತಿದ್ದೇನೆ ಎಂದರು.

Edited By : Somashekar
Kshetra Samachara

Kshetra Samachara

28/08/2022 10:37 pm

Cinque Terre

12.32 K

Cinque Terre

0