ಮಂಗಳೂರು: ಉಕ್ರೇನ್ನಲ್ಲಿ ಸಿಲುಕಿಕೊಂಡಿರುವ ಮಂಗಳೂರು ಮೂಲದ ವಿದ್ಯಾರ್ಥಿನಿಯೋರ್ವಳ ಪಾಸ್‌ಪೋರ್ಟ್ ಕಳೆದು ಹೋಗಿ ಸಂಕಷ್ಟಕ್ಕೆ ಸಿಲುಕಿದ್ದಾಳೆ.ಇಲ್ಲಿನ ದೇರೆಬೈಲ್ನ ಅನೈನಾ ಅನ್ನಾ ಎಂಬುವವರು ದಾಳಿಗೊಳಗಾದ ಖಾರ್ಕಿವ್ ನಗರದಲ್ಲಿ ವಾಸಿಸುತ್ತಿದ್ದರು. ಇವರ ಯುನಿವರ್ಸಿಟಿ ಕಟ್ಟಡದ ಪಕ್ಕದಲ್ಲೇ ಇದ್ದಂತಹ ಕಟ್ಟಡವೊಂದು ಸ್ಫೋಟಗೊಂಡು ಕಂಗಾಲಾಗಿದ್ದಾರೆ.
ಭಯಗೊಂಡ ಇವರು ಬಂಕರ್ ಬಿಟ್ಟು ರೈಲು ಹತ್ತಿದ್ದಾರೆ.ಆದರೆ, ಇವರ ಪಾಸ್‌ಪೋರ್ಟ್ ಏಜೆಂಟ್ ಒಬ್ಬರ ಬಳಿ ಇದೆ. ಅವರಿಗೆ ಕರೆ ಮಾಡಿದರೆ ಅವರಿದ್ದ ಜಾಗಕ್ಕೆ ಬಂದು ಪಡೆಯುವಂತೆ ಹೇಳುತ್ತಿದ್ದಾರೆ. ಆದರೆ ಆ ಸ್ಥಳದಲ್ಲಿ ದಾಳಿ ನಡೆಯುತ್ತಿರುವುದರಿಂದ ಅಲ್ಲಿಗೆ ಹೋಗಲು ಸಾಧ್ಯವಾಗಿಲ್ಲ.
ಇದೀಗ ರೈಲು ಹತ್ತಿ ಪೋಲೆಂಡ್ ಕಡೆಗೆ ಹೊರಟಿರುವುದರಿಂದ ಪಾಸ್‌ಪೋರ್ಟ್ ಸಿಗುವ ಸಾಧ್ಯತೆ ಕಡಿಮೆ ಇದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಈ ಬಗ್ಗೆ ರಾಯಭಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದು, ತಾತ್ಕಾಲಿಕ ವ್ಯವಸ್ಥೆಯ ಭರವಸೆಯನ್ನು ನೀಡಿದ್ದಾರೆ ಎಂದು ಅನೈನಾ ಅನ್ನಾ ಅವರ ತಾಯಿ ಸಂಧ್ಯಾ ಅವರು ತಿಳಿಸಿದ್ದಾರೆ.ಈ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ನಳಿನ್, ಸದ್ಯ ಪಾಸ್‌ಪೋರ್ಟ್ ಇಲ್ಲದೆಯೂ ಭಾರತೀಯರಿಗೆ ಭಾರತಕ್ಕೆ ಬರಲು ಅವಕಾಶ ನೀಡಲಾಗುತ್ತಿದೆ ಎಂಬ ಮಾಹಿತಿ ನೀಡಿದ್ದಾರೆ.
Kshetra Samachara
02/03/2022 10:04 pm