ಲೋಕ ಕಲ್ಯಾಣಾರ್ಥ ಅಮೆರಿಕದ ಫೀನಿಕ್ಸ್ ನ ಪುತ್ತಿಗೆ ಮಠದಲ್ಲಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಸಂಕಲ್ಪದಂತೆ ಎ. 11 ರಂದು ಆರಂಭಗೊಂಡ ಶತಚಂಡಿಕಾ ಯಾಗವು ಪೂರ್ಣಾಹುತಿಯೊಂದಿಗೆ ಸಂಪನ್ನಗೊಂಡಿತು.
10 ಮಂದಿ ಋತ್ವಿಜರಿಂದ 100 ಪಾರಾಯಣ, ಲಕ್ಷ ನವಾಕ್ಷರಿ ಮಂತ್ರ ಜಪ, ಹತ್ತು ಸಾವಿರ ಆಜ್ಯ ಹೋಮ ಮೂಲಕ ಶತ ಚಂಡಿಕಾಯಾಗ ನೆರವೇರಿತು.
ಶ್ರೀನಿವಾಸ ದೇವರಿಗೆ ಮತ್ತು ಶ್ರೀ ದುರ್ಗೆಗೆ ಕುಂಭಾಭಿಷೇಕ ಜರಗಿತು. ಸುಖ, ಶಾಂತಿ ಸಮೃದ್ಧಿ ಪ್ರಾಪ್ತ ವಾಗಬೇಕಾದರೆ ಶ್ರೀದೇವಿಗೆ ಶರಣು ಹೋಗಬೇಕು. ಈ ಹಿನ್ನೆಲೆಯಲ್ಲಿ ಶತಚಂಡಿಕಾ ಯಾಗ ಆಯೋಜಿಸಲಾಯಿತು ಎಂದು ಶ್ರೀಪಾದರು ಆಶೀರ್ವಚನದಲ್ಲಿ ಹೇಳಿದರು.
ವಿಷ್ಣು ಚಕ್ರಾಬ್ಜ್ಯ ಪೂಜೆಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಅಮೆರಿಕದ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಭೋಜನ ಪ್ರಸಾದ ಸ್ವೀಕರಿಸಿದರು.
PublicNext
18/04/2022 01:05 pm