ಎನ್ ಐ ಟಿ ಕೆ ಬೀಚ್ ರಸ್ತೆ ತೀವ್ರ ಅದೋಗತಿಯಲ್ಲಿದ್ದು ಈ ರಸ್ತೆಯಲ್ಲಿ ಸಂಚರಿಸುತ್ತಿರುವ ವಾಹನ ಸವಾರರು ಸಂಬಂಧಪಟ್ಟ ಇಲಾಖೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಸುರತ್ಕಲ್ ಸಮೀಪ ರಾಷ್ಟ್ರೀಯ ಹೆದ್ದಾರಿ ಎನ್ ಐ ಟಿ ಕೆ ಇಂಜಿನಿಯರಿಂಗ್ ಕಾಲೇಜ್ ಬಳಿಯ ಸದಾಶಿವ ದೇವಸ್ಥಾನದ ದ್ವಾರದಿಂದ ಒಳಬದಿಗೆ ಹೋಗುವ ಸಮುದ್ರ ಕಿನಾರೆ ಬಳಿಯ ರಸ್ತೆ ಕಳೆದ ವರ್ಷಗಳ ಹಿಂದೆ ಸುರಿದ ಭಾರಿ ಮಳೆಗೆ ಕೊಚ್ಚಿ ಹೋಗಿ ಹೊಂಡಮಯವಾಗಿತ್ತು.
ಈ ಸಂದರ್ಭ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಡಾ. ಭರತ್ ಶೆಟ್ಟಿ ದುರಸ್ತಿಯ ಭರವಸೆ ನೀಡಿದ್ದರು. ಆದರೆ ವರ್ಷಗಳು ಕಳೆದರೂ ಇದುವರೆಗೂ ರಸ್ತೆ ದುರಸ್ತಿಯಾಗಿಲ್ಲ. ಸುರತ್ಕಲ್ ಎನ್ ಐ ಟಿ ಕೆ ಬೀಚ್ , ದೀಪ ಸ್ತಂಭ, ಸದಾಶಿವ ದೇವಸ್ಥಾನಕ್ಕೆ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಿದ್ದು ರಸ್ತೆ ಅವ್ಯವಸ್ಥೆಯಿಂದ ಬೀಚ್ ಪ್ರವಾಸೋದ್ಯಮ ಕಳೆಗುಂದಿದೆ.
ಈ ರಸ್ತೆ ದುರಸ್ತಿ ಪಡಿಸಲು ಎನ್ಐಟಿಕೆ ಟೋಲ್ ಮಾಫಿಯಾ ಅಡ್ಡಿಪಡಿಸುತ್ತಿದ್ದಾರೆ ಎಂದು ಸ್ಥಳೀಯರ ಆರೋಪ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಎನ್ ಐ ಟಿ ಕೆ ಯಅವೈಜ್ಞಾನಿಕ ಟೋಲ್ ತಪ್ಪಿಸಿ ಬೀಚ್ ಒಳ ರಸ್ತೆಯಲ್ಲಿ ಬರುವ ವಾಹನಗಳು ಅಪಾಯಕಾರಿ ರಸ್ತೆಯಲ್ಲಿ ಹೊಂಡ ತಪ್ಪಿಸಲು ಹೋಗಿ ಈಗಾಗಲೇ ಅನೇಕ ಅಪಘಾತಗಳು ಸಂಭವಿಸಿದೆ.
ಈ ರಸ್ತೆಯಲ್ಲಿ ಭಾರಿ ಗಾತ್ರದ ಹೋಂಡಗಳಿಂದ ಸಂಚಾರ ದುಸ್ತರವಾಗಿದೆ. ಕೂಡಲೇ ಶಾಸಕರು ಎಚ್ಚೆತ್ತು ಯಾರ ಲಾಭಿಗೂ ಮಣಿಯದೆ ರಸ್ತೆ ದುರಸ್ತಿ ಪಡಿಸುವುದರ ಜೊತೆಗೆ ಬೀಚ್ ಪ್ರವಾಸಕ್ಕೆ ಉತ್ತೇಜನ ನೀಡಬೇಕು ಎಂದು ಸ್ಥಳೀಯ ನಾಗರಿಕರು ಒತ್ತಾಯಿಸಿದ್ದಾರೆ.
PublicNext
06/10/2022 05:33 pm