ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: ಕೆಎಸ್ಆರ್‌ಟಿಸಿ ದಸರಾ ಟೂರ್ ಪ್ಯಾಕೇಜ್, ತೊಕ್ಕೊಟ್ಟಿನಿಂದಲೂ ವಿಶೇಷ ಬಸ್ ವ್ಯವಸ್ಥೆ

ಉಳ್ಳಾಲ: ನವರಾತ್ರಿ ಪ್ರಯುಕ್ತ ಕೆಎಸ್‌ಆರ್‌ಟಿಸಿ ಮಂಗಳೂರು ಡಿಪೋದಿಂದ ಸಾರ್ವಜನಿಕರಿಗಾಗಿ ಪ್ರಾರಂಭಿಸಲಾದ ಜಿಲ್ಲೆಯ ಒಂಬತ್ತು ಪ್ರಮುಖ ದೇಗುಲ ದರ್ಶನದ "ದಸರಾ ಟೂರ್ ಪ್ಯಾಕೇಜ್‌"ಗೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಉಳ್ಳಾಲ ತಾಲೂಕಿನ ಜನರಿಗೂ ಪ್ಯಾಕೇಜ್ ಸಿಗುವಂತಹ ಅವಕಾಶವನ್ನು ಕೆಎಸ್ಆರ್‌ಟಿಸಿ ಮಂಗಳೂರು‌ ಡಿಪೋ ಕಲ್ಪಿಸಿದೆ.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ ಹಾಗೂ ನಿಯೋಗ ಕೆಎಸ್ಆರ್‌ಟಿಸಿ ಮಂಗಳೂರು ಡಿಪೋ ವಿಭಾಗೀಯ ನಿಯಂತ್ರಕ ರಾಜೇಶ್ ಶೆಟ್ಟಿ ಅವರಿಗೆ ಮನವಿಯೊಂದನ್ನು ಸಲ್ಲಿಸಿದ್ದು ಅದರಂತೆ ಇದೀಗ ದಸರಾ ಟೂರ್ ಪ್ಯಾಕೇಜ್ ಉಳ್ಳಾಲ ತಾಲೂಕಿನ ಜನರಿಗೂ ಸಿಗುವಂತಾಗಿದೆ. ನಾಳೆ ಶನಿವಾರ ಬೆಳಗ್ಗೆ 7:30ರಿಂದ ತೊಕ್ಕೊಟ್ಟು ಕೇಂದ್ರ ಬಸ್‌ ನಿಲ್ದಾಣದಿಂದ ಕೆಎಸ್‌ಆರ್‌ಟಿಸಿ ವಿಶೇಷ ಬಸ್‌ಗಳನ್ನ ಆರಂಭಿಸಲಿದ್ದು, ಪ್ರಯಾಣಿಕರು

ಮಂಗಳಾದೇವಿ, ಪೊಳಲಿ ಶ್ರೀ ರಾಜರಾಜೇಶ್ವರಿ, ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ, ಕಟೀಲು ಶ್ರೀ ದುರ್ಗಾಪರಮೇಶ್ವರಿ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ, ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರ ಮತ್ತು ಸಸಿಹಿತ್ಲು ಬೀಚ್ ಸಂದರ್ಶನ ನಂತರ ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ, ಉರ್ವ ಶ್ರೀ ಮರಿಯಮ್ಮ ದೇವಾಲಯ ಮತ್ತು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯಗಳಿಗೆ ತೆರಳಿ ನವದುರ್ಗೆಯರ ವಿಗ್ರಹಗಳನ್ನು ವೀಕ್ಷಿಸಬಹುದಾಗಿದೆ. ವಯಸ್ಕರಿಗೆ 350 ರೂ. ಮತ್ತು ಮಕ್ಕಳಿಗೆ 300 ರೂ. ಪ್ರಯಾಣ ದರ ನಿಗದಿ ಪಡಿಸಲಾಗಿದೆ.

Edited By : Vijay Kumar
Kshetra Samachara

Kshetra Samachara

30/09/2022 02:10 pm

Cinque Terre

2.27 K

Cinque Terre

0

ಸಂಬಂಧಿತ ಸುದ್ದಿ