ಉಡುಪಿ: ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವಿಶೇಷ ಸಭೆ ಇವತ್ತು ನಡೆಯಿತು. ಉಡುಪು ಶಾಸಕ ಕೆ. ರಘುಪತಿ ಭಟ್ ಅವರು ಸಭೆಯಲ್ಲಿ ಪಾಲ್ಗೊಂಡು ವಿವಿಧ ಯೋಜನೆಗಳನ್ನು ಕಾರ್ಯಗತಗೊಳಿಸುವ ಬಗ್ಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮನೋಹರ್ ಕಲ್ಮಾಡಿ, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರುಗಳಾದ ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಕಿಶೋರ್ ಕುಮಾರ್, ಸುಮಾ ನಾಯ್ಕ್, ಮಾಲತಿ ಸುಧಾಕರ್, ಯೋಗೀಶ್ ಚಂದ್ರಾಧರ್, ಉಡುಪಿ ನಗರ ಸಭೆಯ ಪೌರಾಯುಕ್ತರಾದ ಉದಯ್ ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಗುರುಪ್ರಸಾದ್, ನಗರ ಯೋಜನಾ ಸದಸ್ಯರಾದ ನವೀನ್ ಕುಮಾರ್, ಸಹಾಯಕ ಯೋಜನಾ ಸದಸ್ಯರಾದ ಸಚಿನ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಜಗದೀಶ್ ಭಟ್, ಸಹಾಯಕ ಅಭಿಯಂತರರಾದ ಗಿರೀಶ್ ಉಪಸ್ಥಿತರಿದ್ದರು.
Kshetra Samachara
24/09/2022 02:17 pm