ಶಿರ್ವ : ಕಟಪಾಡಿ ಶಿರ್ವ ಮುಖ್ಯ ರಸ್ತೆಯ ಬಂಟಕಲ್ಲು ಎಂಜಿನಿಯರಿಂಗ್ ಕಾಲೇಜಿನಿಂದ ಶಿರ್ವ ಗುರುಂಜದವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದೆ.ಈ ರಸ್ತೆಯಲ್ಲಿ ಸಂಚರಿಸಲು ಸವಾರರಿಗೆ ತೊಂದರೆಯಾಗುತ್ತಿದ್ದು ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ.ಈ ಹಿನ್ನೆಲೆಯಲ್ಲಿ ರಸ್ತೆ ಗುಂಡಿಗಳನ್ನು ಶ್ರಮದಾನದ ಮೂಲಕ ಶಿರ್ವ ಗ್ರಾಮೀಣ ಕಾಂಗ್ರೆಸ್ ವತಿಯಿಂದ ಮುಚ್ಚಲಾಯಿತು.
ಈ ಸಂದರ್ಭದಲ್ಲಿ ಶಿರ್ವ ಗ್ರಾಮೀಣ ಕಾಂಗ್ರೆಸ್ ಹಾಗೂ ಗ್ರಾ.ಪಂ. ಅಧ್ಯಕ್ಷ ರತನ್ ಶೆಟ್ಟಿ, ಉಪಾಧ್ಯಕ್ಷೆ ಗ್ರೇಸಿ ಕಾರ್ಡೋಜಾ, ಜಿ.ಪಂ. ಮಾಜಿ ಸದಸ್ಯ ವಿಲ್ಸನ್ ರೋಡ್ರಿಗಸ್,ಗ್ರಾಮೀಣ ಕಾಂಗ್ರೆಸ್ ಪ್ರ. ಕಾರ್ಯದರ್ಶಿ ಮೆಲ್ವಿನ್ ಡಿಸೋಜಾ, ಗ್ರಾ.ಪಂ. ಮಾಜಿ ಅಧ್ಯಕ್ಷ ಹಸನಬ್ಬ ಶೇಖ್, ಸದಸ್ಯರಾದ ಸತೀಶ್ ಬಂಟಕಲ್ಲು ,ಜೆಸಿಂತಾ ಡಿ'ಸೋಜಾ, ಕಾರ್ಯಕರ್ತರಾದ ಲ್ಯಾನ್ಸಿ ಕೋರ್ಡಾ,ಆಲ್ವಿನ್ ಬಂಟಕಲ್ಲು, ದಿನೇಶ್ ಬಂಟಕಲ್ಲು ಮತ್ತಿತರರು ಈ ಕಾರ್ಯದಲ್ಲಿ ಭಾಗಿಯಾದರು.
Kshetra Samachara
21/09/2022 04:14 pm