ಮಣಿಪಾಲ: ಮಣಿಪಾಲ ಸಮೀಪದ ಸರಳೆಬೆಟ್ಟುವಿಲ್ಲಿರುವ ಹೊಸ ಬೆಳಕು ಆಶ್ರಮಕ್ಕೆ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಅರುಣ್ ಕುಮಾರ್ ಕಲ್ಗದ್ದೆ ಭೇಟಿ ನೀಡಿದರು.
ಹೊಸ ಬೆಳಕು ಆಶ್ರಮದ ಸಹಸಂಚಾಲಕ ವಿನಯ್ ಚಂದ್ರ ಸಾಸ್ತಾನ, ಅರುಣ್ ಕುಮಾರ್ ಕಲ್ಗದ್ದೆ ಅವರನ್ನು ಸ್ವಾಗತಿಸಿ ಆಶ್ರಮಕ್ಕೆ ಬರಮಾಡಿಕೊಂಡರು.
ಹಲವು ವರ್ಷಗಳಿಂದ ನಿರ್ಗತಿಕರ ಸೇವೆಯಲ್ಲಿ ತೊಡಗಿರುವ ಹೊಸ ಬೆಳಕು ಆಶ್ರಮಕ್ಕೆ ಭೇಟಿ ನೀಡಿದ ಅವರು ಆಶ್ರಮದ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದರು. ನಂತರ ಮಾತನಾಡಿದ ಅವರು ಆಶ್ರಮ ಉತ್ತಮ ಸೇವೆಯಲ್ಲಿ ತೊಡಗಿಕೊಂಡಿದೆ. ಮುಂದಿನ ದಿನಗಳಲ್ಲಿ ಇಲಾಖೆಯಿಂದ ಅಗತ್ಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.
Kshetra Samachara
14/09/2022 08:43 pm