ಬ್ರಹ್ಮಾವರ: ಬಾರಕೂರು ಶಿವಮೊಗ್ಗ ರಾಜ್ಯ ರಸ್ತೆಯ ಹಂದಾಡಿ ಬಳಿಯ ಕಿರು ಸೇತುವೆಯಲ್ಲಿ ಅರ್ಧಂಬರ್ಧ ಕಾಮಗಾರಿ ಕುರಿತು ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿ ಬಿತ್ತರಿಸಿತ್ತು. ಇದರಿಂದ ಎಚ್ಚೆತ್ತ ಪೊಲೀಸ್ ಅಧಿಕಾರಿಗಳು ಮುಂಜಾಗ್ರತೆ ಕ್ರಮ ಕೈಗೊಂಡಿದ್ದಾರೆ.
ಹೌದು. ಹಂದಾಡಿ ಬಳಿಯ ಕಿರು ಸೇತುವೆಯಲ್ಲಿ ಕಾಮಗಾರಿ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ರಸ್ತೆಯು ಅರ್ಧದಷ್ಟು ಮಾತ್ರ ಕಾಣುತ್ತಿತ್ತು. ಆದರೆ ಕಂದಕ ಕಾಣದ ಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಸುದ್ದಿ ಬಿತ್ತರಿಸಿತ್ತು. ಕೆಲವೇ ಗಂಟೆಗಳಲ್ಲಿ ಇದರ ಗಂಭೀರತೆಯನ್ನು ಮನಗಂಡು ಬ್ರಹ್ಮಾವರ ಪೊಲೀಸ್ ಠಾಣಾಧಿಕಾರಿ ಗುರುನಾಥ್ ಬಿ.ಹಾದಿಮನಿ ಅವರು ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ತಕ್ಷಣದಲ್ಲಿ ರಿಪ್ಲೆಕ್ಟ್ ಇರುವ ಮೂರು ಬ್ಯಾರಿಕೇಡ್ ಅಳವಡಿಸಿದ್ದಾರೆ.
ಭಾರಿ ಮಳೆಯ ನಡುವೆಯೂ ಅಪಾಯದ ಕರೆ ಗಂಟೆಯ ಪ್ರದೇಶದ ಕುರಿತು ಗಮನ ಸೆಳೆದ ಪಬ್ಲಿಕ್ ನೆಕ್ಸ್ಟ್ ಎನ್ನುವ ಪದಕ್ಕೆ ಪಬ್ಲಿಕ್ ಫಸ್ಟ್ ಆಗಬೇಕು ಎಂದು ಠಾಣಾಧಿಕಾರಿಯವರು ಪ್ರತಿಕ್ರಿಯಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Kshetra Samachara
07/09/2022 10:37 pm