ಮಂಗಳೂರು : ಬೀಚ್ ನೋಡಲು ಬರುವ ಪ್ರವಾಸಿಗರಿಂದ ಸುತ್ತಮುತ್ತಲಿನ ಪರಿಸರದಲ್ಲಿ ರಾಶಿ ರಾಶಿ ತ್ಯಾಜ್ಯ ವಸ್ತುಗಳನ್ನು ಹಾಕಿ ಸ್ವಚ್ಛತೆಯನ್ನು ಕಾಪಾಡದಿರುವುದನ್ನು ಗಮನಿಸಿದ ಮಂಗಳೂರು ಕರಾವಳಿ ಕಾವಲು ಪಡೆ ಪೊಲೀಸರು ಹಾಗೂ ಕರಾವಳಿ ನಿಯಂತ್ರಣ ದಳದ ಸದಸ್ಯರು ಸೇರಿ ಮಂಗಳೂರು ಕಸಬಾ ಬೆಂಗ್ರೆ ಪರಿಸದಲ್ಲಿ ಇಂದು ನಾಲ್ಕನೆಯ ಬಾರಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಪ್ರತಿ ಭಾನುವಾರ ಬೀಚ್ ಪರಿಸರದಲ್ಲಿ ಸ್ವಚ್ಛತೆಯನ್ನು ಮಾಡುವ ಮೂಲಕ ಪರಿಸರವನ್ನು ಕಾಪಾಡುವ ಕೆಲಸ ಮಾಡುತ್ತಿದ್ದಾರೆ. ಪ್ರವಾಸಿಗರು ಇನ್ನು ಮುಂದೆ ಬೀಚ್ ಗೆ ಬಂದಾಗ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಕಿ ಪರಿಸರ ಹಾಳು ಮಾಡಬಾರದೆಂದು ಕರಾವಳಿ ಪೊಲೀಸರು ಮನವಿ ಮಾಡಿದ್ದಾರೆ.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಂಗಳೂರು ಕರಾವಳಿ ಕಾವಲು ಪಡೆ(CSP) ಇನ್ ಪೆಕ್ಟರ್ ದಿನೇಶ್ ಕುಮಾರ್ ಅವರ ನೇತೃತ್ವದ 15 ಸಿಬ್ಬಂದಿ ಮತ್ತು ಕರಾವಳಿ ನಿಯಂತ್ರಣ ದಳದ(KND) 15 ಸದಸ್ಯರು ಹಾಗೂ ಸಮಾಜ ಸೇವಕ ಹಾಗೂ ಯೋಗ ತರಬೇತುದಾರ ಗೋಪಾಲ್ ಬಾಳಿಗ ಮತ್ತು ಜಪನ್ ದೇಶದ ಯೋಗ ವಿದ್ಯಾರ್ಥಿ ಇವರ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ.
Kshetra Samachara
04/09/2022 01:49 pm