ಕುಂದಾಪುರ: “ಭಕ್ತಿಯಿಂದ ಬೇಡಿದರೆ ಇವ ಒಲಿಯುವ” ಈ ಹಾಡಿನ ಧ್ವನಿ ಸುರುಳಿಯನ್ನು ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ ಡಾ.ಅಣ್ಣಯ್ಯ ಕುಲಾಲ್ ಬಿಡುಗಡೆಗೊಳಿಸಿದರು. ವರ್ಷಿತ್ ಶೆಟ್ಟಿ ಉಳ್ಳೂರು ಮೊದಲ ಬಾರಿಗೆ ಶ್ರೀ ದೇವರ ಚೊಚ್ಚಲ ಸಾಹಿತ್ಯದೊಂದಿಗೆ ರಚನೆಗೊಂಡ ಹಾಗೂ ರವಿ ಬನ್ನಾಡಿಯವರ ಕಂಠದಲ್ಲಿ ಮೂಡಿಬಂದ ಈ ಧ್ವನಿಸುರುಳಿಯನ್ನು 18ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಉಳ್ಳೂರು ಇದರ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಅರಸು ಪ್ರಶಸ್ತಿ ಪುರಸ್ಕೃತ ಅಣ್ಣಯ್ಯ ಕುಲಾಲ್ ದಂಪತಿಗಳನ್ನು ಗೌರವಿಸಲಾಯಿತು. ವರ್ಷಿತ್ ಶೆಟ್ಟಿ ಉಳ್ಳೂರು, ರವಿ ಬನ್ನಾಡಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಳ್ಳೂರು ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
02/09/2022 10:36 pm