ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ತಡೆರಹಿತ ಬಸ್‌ಗಳ ಪೈಪೋಟಿ; ಬಸ್ ತಡೆದು ನಾಗರಿಕರು ಆಕ್ರೋಶ

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಬಸ್‌ ನಿಲ್ದಾಣದ ಜಂಕ್ಷನ್ ಬಳಿ ತಡೆರಹಿತ ಬಸ್‌ಗಳ ಪೈಪೋಟಿ ಹಾಗೂ ಕ್ಷುಲ್ಲಕ ಕಾರಣಕ್ಕೆ ಎರಡು ಚಾಲಕರ ನಡುವೆ ಗಲಾಟೆ ನಡೆದಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ನಾಗರಿಕರು ಬಸ್‌ ತಡೆದು ಚಾಲಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಎರಡು ತಡೆರಹಿತ ಬಸ್‌ಗಳ ಚಾಲಕರು ಮುಲ್ಕಿ ಬಸ್ ನಿಲ್ದಾಣದ ಬಳಿ ಟೈಮಿಂಗ್ ವಿಷಯದಲ್ಲಿ ಗಲಾಟೆ ಮಾಡಿಕೊಂಡಿದ್ದು ಒಂದು ಬಸ್‌ನ ಚಾಲಕ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿ ಇನ್ನೊಂದು ಬಸ್‌ನ್ನು ತಡೆದಿದ್ದಾನೆ.

ಈ ಸಂದರ್ಭ ಹೆದ್ದಾರಿ ಸಂಚಾರ ತಡೆಯಾಗಿದೆ. ಕೂಡಲೇ ಸಕಾಲದಲ್ಲಿ ಸ್ಥಳೀಯ ನಾಗರಿಕರು ಧಾವಿಸಿ ತಡೆರಹಿತ ಬಸ್‌ನ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದು ಸ್ಥಳದಲ್ಲಿ ಗೊಂದಲಮಯ ವಾತಾವರಣ ಸೃಷ್ಟಿಯಾಯಿತು. ಬಳಿಕ ಚಾಲಕ ಕ್ಷಮೆ ಕೇಳಿದ್ದಾನೆ. ಪ್ರಕರಣ ಮುಗಿಯುತ್ತಲೇ ಪೊಲೀಸರು ಎಂಟ್ರಿ ಆಗಿದ್ದು ಬರಿಗೈಯಲ್ಲಿ ಹಿಂದಿರುಗಿದ್ದಾರೆ.

Edited By :
Kshetra Samachara

Kshetra Samachara

29/08/2022 09:43 pm

Cinque Terre

12.49 K

Cinque Terre

3

ಸಂಬಂಧಿತ ಸುದ್ದಿ