ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಪಾದಚಾರಿ ರಸ್ತೆ ಆಕ್ರಮಣ : ನಡೆದಾಡಲು ಅಡ್ಡಿ !

ಉಡುಪಿ: ಗೌರಿಗಣೇಶ ಹಬ್ಬಕ್ಕೆ ಕೆಲವು ದಿನಗಳಷ್ಟೆ ಬಾಕಿ ಉಳಿದಿವೆ. ನಗರದ ಕವಿ ಮುದ್ದಣ ಮಾರ್ಗದ ತ್ರಿವೇಣಿ ಸರ್ಕಲ್ ಬಳಿಯ ಪಾದಚಾರಿ ರಸ್ತೆಯಲ್ಲಿ ಟಾರ್ಪಲು ಹೊದಿಸಿ, ಪಾದೆಕಲ್ಲು ಹಾಕಿ ತಮ್ಮ ಮಾರಾಟದ ಸ್ಥಳಗಳನ್ನು ಹೂವಿನ ವ್ಯಾಪಾರಿಗಳು ಈಗಾಗಲೇ ಕಾಯ್ದಿರಿಸಿಕೊಂಡಿದ್ದಾರೆ.

ಇದರಿಂದಾಗಿ ಸಾರ್ವಜನಿಕರು, ಹಿರಿಯ ನಾಗರಿಕರು, ಶಾಲಾ ವಿದ್ಯಾರ್ಥಿಗಳು ಫುಟ್‌ಪಾತ್ ನಲ್ಲಿ ನಡೆದಾಡಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಪಾದಚಾರಿಗಳು ರಸ್ತೆ ಬಿಟ್ಟು ವಾಹನ ದಟ್ಟಣೆಯ ನಡುರಸ್ತೆಯಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಿದೆ.

ರಸ್ತೆ ಬದಿಯಲ್ಲಿ ವಾಹನ ನಿಲುಗಡೆ ಸ್ಥಳ ಇದ್ದು, ಜನ ನಡೆದಾಡಲು ಸಮಸ್ಯೆ ಎದುರಾಗಿದೆ. ಈ ಸಮಸ್ಯೆಯ ಕುರಿತು ಸಾರ್ವಜನಿಕರ ದೂರುಗಳು ಕೇಳಿಬಂದಿವೆ. ನಗರಸಭೆ ತಕ್ಷಣ ಸಮಸ್ಯೆಯತ್ತ ಗಮನ ಹರಿಸಬೇಕು ಎಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.

Edited By : Shivu K
Kshetra Samachara

Kshetra Samachara

27/08/2022 07:30 pm

Cinque Terre

3.81 K

Cinque Terre

1

ಸಂಬಂಧಿತ ಸುದ್ದಿ