ಉಡುಪಿ: ಕರಾವಳಿಯ ರಸ್ತೆಗಳು ಹದಗೆಟ್ಟಿದ್ದು ಜನ ಪ್ರತಿನಿತ್ಯ ಹಿಡಿಶಾಪ ಹಾಕಿ ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ಎರಡು ದಿನ ಮಳೆ ಬಂದರೆ ರಸ್ತೆ ಹೊಂಡಗಳು ಕೆಸರು ನೀರಿನಿಂದ ತುಂಬುತ್ತಿವೆ. ಎರಡು ದಿನ ಬಿಸಿಲು ಬಂದರೆ ನೀರು ಆರಿ ಹೋಗುತ್ತಿದೆ. ನಗರದ ಇಂದ್ರಾಳಿ ಜಂಕ್ಷನ್, ಪರ್ಕಳ ಮತ್ತಿತರೆಡೆಗಳಲ್ಲಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ಇದೆ. ಆದರೆ ಶಾಸಕರು ಮಾತ್ರ ಮಳೆ ನಿಲ್ಲಲಿ, ಮಳೆ ನಿಲ್ಲಲಿ ಎನ್ನುತ್ತಿದ್ದಾರೆ.
ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಸೆ.2 ರಂದು ಮಂಗಳೂರಿಗೆ ಬರುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ಡಾಂಬರು ಹಾಕುವ ಕಾರ್ಯ ಭರದಿಂದ ಸಾಗಿದೆ.ಅಲ್ಲಿ ಪ್ರಧಾನಿ ಬರುವ ಕಾರಣಕ್ಕಾದರೂ ಡಾಂಬರು ಹಾಕುತ್ಯಿದ್ದಾತೆ .ನಮಗೆ ಆ ಭಾಗ್ಯವೂ ಇಲ್ಲ ಎಂಬ ಬೇಸರ ಉಡುಪಿ ಜನರದ್ದು.ಈ ಕಾರಣದಿಂದಾಗಿ ಉಡುಪಿಯ ಜನ ,ಮೋದೀಜಿ ,ನೀವು ಮಂಗಳೂರಿಗೆ ಬಂದಾಗ ಇಲ್ಲಿಗೂ ಬನ್ನಿ, ನಮ್ಮ ರಸ್ತೆಗಳು ಡಾಂಬರು ಕಾಣುವಂತಾಗಲಿ ಎಂದು ಹದಗೆಟ್ಟ ರಸ್ತೆಗಳ ಚಿತ್ರಗಳನ್ನು ಟ್ಯಾಗ್ ಮಾಡುತ್ತಿದ್ದಾರೆ.
ವೈದ್ಯರೊಬ್ಬರು, ಮೋದೀಜಿ, ನೀವು ಪರ್ಕಳಕ್ಕೆ ಬರುವುದಾದರೆ ಸ್ವಾಗತ ಸಮಿತಿಯ ಅಧ್ಯಕ್ಷ ನಾನಾಗುತ್ತೇನೆ. ದಯಮಾಡಿ ಬನ್ನಿ, ನಮ್ಮ ಪರ್ಕಳ ರಸ್ತೆ ಡಾಂಬರು ಕಾಣುವಂತಾಗಲಿ ಎಂದು ಶಾಸಕರು ಮತ್ತು ಜನಪ್ರತಿನಿಧಿಗಳಿಗೆ ಟಾಂಗ್ ಕೊಟ್ಟಿದ್ದಾರೆ.ಅಂತೂ ಇಲ್ಲಿಯ ಹದಗೆಟ್ಟ ರಸ್ತೆಗಳು ಜನರಿಗೆ ನಿತ್ಯ ಟ್ರಾಲ್ ನ ಸಬ್ಜೆಕ್ಟ್ ಗಳಾಗಿ ಬಳಕೆಯಾಗುತ್ತಿರುವುದು ಸುಳ್ಳಲ್ಲ
PublicNext
27/08/2022 07:04 pm