ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ ಪುರಸಭೆಯಲ್ಲಿ ಅಜೆಂಡಾ ಕೋಲಾಹಲ: ಕಾಂಗ್ರೆಸ್ ಸದಸ್ಯರಿಂದ ವಿರೋಧ ಸದನದ ಬಾವಿಗೆ ಇಳಿದು ಪ್ರತಿಭಟನೆ

ವರದಿ :ಕೃಷ್ಣ ಎನ್ ಅಜೆಕಾರ್

ಕಾರ್ಕಳ : ಸರ್ಕಾರದಿಂದ ಪುರಸಭೆಗೆ ನಾಮನಿರ್ದೇಶನಗೊಂಡ ಸದಸ್ಯರಿಗೆ ಸಭೆಯಲ್ಲಿ ಅಜೆಂಡಾ ಮಂಡಿಸುವ ಯಾವುದೇ ಅಧಿಕಾರವಿಲ್ಲ ಅಂತಹ ಸದಸ್ಯರು ಪುರಸಭೆಯ ಚರ್ಚೆಗಳಲ್ಲಿ ಭಾಗವಹಿಸಲು ಮಾತ್ರ ಅವಕಾಶವಿದೆ ಎಂದು ಕಾರ್ಕಳ ಪುರಸಭೆಯಲ್ಲಿ ವಿಪಕ್ಷ ಕಾಂಗ್ರೆಸ್ ಸದಸ್ಯರು ತೀವ್ರ ಗದ್ದಲ ಎಬ್ಬಿಸಿದರು.

ಇಂದು (ಶುಕ್ರವಾರ) ಕಾರ್ಕಳ ಪುರಸಭೆ ಅಧ್ಯಕ್ಷೆ ಸುಮಾ ಕೇಶವ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚೆ ಆರಂಭವಾಗುತ್ತಿದ್ದಂತೆ ಸಭೆಯ ನಡಾವಳಿಯಲ್ಲಿ ನಾಮನಿರ್ದೇಶಕ ಸದಸ್ಯರ ಅಜೆಂಡಾದ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯ ಶುಭದ್ ರಾವ್ ಅಶ್ಪಕ್ ಅಹಮದ್ ಪ್ರತಿಮಾ ರಾಣೆ,ರಹಮತ್ ಶೇಕ್, ಸೇರಿದಂತೆ ಇತರೇ ಸದಸ್ಯರು ತೀವ್ರ ಕ್ಷೇತ್ರ ವ್ಯಕ್ತಪಡಿಸಿದಾಗ ಸಿಟ್ಟಿಗೆದ್ದ ನಾಮ ನಿರ್ದೇಶಿತ ಸದಸ್ಯ ಸಂತೋಷ್ ರಾವ್ ಸಂಧ್ಯಾ ಮಲ್ಯ, ಅವಿನಾಶ್ ಶೆಟ್ಟಿ ಮುಂತಾದವರು ಎದ್ದುನಿಂತು ನಾವು ಸರ್ಕಾರದಿಂದ ಆಯ್ಕೆಯಾದ ಜನಪ್ರತಿನಿಧಿಗಳು ನಮಗೂ ಕೂಡ ಸಮಾನ ಹಕ್ಕಿದೆ ಕಾನೂನಿನಲ್ಲಿ ನಾವು ಅಜೆಂಡ ನೀಡುವಂತಿಲ್ಲ ಎಂದು ಹೇಳಿಲ್ಲ ಎಂದಾಗ ಕೆರಳಿದ ವಿಪಕ್ಷ ಕಾಂಗ್ರೆಸ್ ಸದಸ್ಯರು ನಾವು ಯಾವುದೇ ಕಾರಣಕ್ಕೂ ನಾಮ ನಿರ್ದೇಶಕ ಸದಸ್ಯರನ್ನು ಅಜೆಂಡಾಗೆ ಅವಕಾಶ ನೀಡುವುದಿಲ್ಲ ಎಂದು ಸದನದ ಬಾವಿಗೆ ಇಳಿದು ಧರಣಿ ನಡೆಸಿದರು.

ಈ ಕುರಿತು ಮುಖ್ಯ ಅಧಿಕಾರಿ ರೂಪಾ ಶೆಟ್ಟಿ ಮಾತನಾಡಿ ನಾಮ ನಿರ್ದೇಶಕ ಸದಸ್ಯರಿಗೆ ಚರ್ಚೆಯಲ್ಲಿ ಭಾಗವಹಿಸಬಹುದು ಆದರೆ ಅಜೆಂಡಾ ಮಂಡಿಸುವಂತಿಲ್ಲ ಎಂದು ಎಲ್ಲೂ ಉಲ್ಲೇಖವಿಲ್ಲ ಆದರೂ ಈ ಕುರಿತು ಜಿಲ್ಲಾಧಿಕಾರಿಗಳ ಬಳಿ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಕ ಪ್ರತಿಭಟನೆಯನ್ನು ವಾಪಸ್ ಪಡೆದರು.

ಸಿಂಗಲ್ ಲೇಔಟ್ ಸಮಸ್ಯೆ ಕುರಿತು ಶುಭ ರಾವ್ ವಿಷಯ ಪ್ರಸ್ತಾಪಿಸಿ ಸಿಂಗಲ್ ಲೇಔಟ್ ವಿಚಾರ ಕುರಿತಂತೆ ಈಗಾಗಲೇ ಸರ್ಕಾರದಿಂದ ಪರಿಹಾರ ದೊರೆತಿದೆ ಎಂದು ಪತ್ರಿಕೆಗಳಲ್ಲಿ ಬಂದಿದೆ ಆದರೆ ಕಟ್ಟಡ ನಿರ್ಮಾಣ ಲೈಸನ್ಸ್ ಕೊಡುವಾಗ ಸಿಂಗಲ್ ಲೇಔಟ್ ನ ವಿಚಾರದಲ್ಲಿ ಸ್ಪಷ್ಟತೆ ಇಲ್ಲ ಎಂದು ಸಭೆ ಗಮನಕ್ಕೆ ತಂದರು ಬೀದಿ ನಾಯಿಗಳ ಸಂತಾನ ಹರಣದ ಕುರಿತಂತೆ ಪುರಸಭಾ ಸದಸ್ಯ ಅಶ್ಪಕ್ ಅಹಮದ್ ಗಮನ ಸೆಳೆದು ಇದರಿಂದ ಸಾರ್ವಜನಿಕರ ಓಡಾಟಕ್ಕೆ ತುಂಬಾ ತೊಂದರೆಯಾಗುತ್ತಿದೆ ಅವುಗಳ ನಿಯಂತ್ರಣಕ್ಕೆ ತಕ್ಷಣ ಮುಂದಾಗಬೇಕೆಂದು ಸಭೆಯಲ್ಲಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷೆ ಪಲ್ಲವಿ ಪ್ರವೀಣ, ಸ್ಥಾಯಿ ಸಮಿತಿ ಅಧ್ಯಕ್ಷ ಯೋಗೇಶ್ ದೇವಾಡಿಗ ಮುಂತಾದವರು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

27/08/2022 07:46 am

Cinque Terre

7.32 K

Cinque Terre

0

ಸಂಬಂಧಿತ ಸುದ್ದಿ