ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಅಪಾಯವನ್ನು ಆಹ್ವಾನಿಸುತ್ತಿರುವ ಕನಕದಾಸ ರಸ್ತೆಯ ಮೃತ್ಯು ಕೂಪ !

ಉಡುಪಿ: ಶ್ರೀಕೃಷ್ಣ ಮಠವನ್ನು ಸಂಪರ್ಕಿಸುವ ಕನಕದಾಸ ರಸ್ತೆಯ ಪಾದಚಾರಿ ರಸ್ತೆಯಲ್ಲಿ ಒಳಚರಂಡಿಯ ಚಪ್ಪಡಿ ಬಾಯ್ತೆರೆದುಕೊಂಡಿದ್ದು, ಕಂದಕ ನಿರ್ಮಾಣವಾಗಿದೆ. ಹಲವಾರು ಯಾತ್ರಿಕರು ಈಗಾಗಲೇ ಇಲ್ಲಿ ಎಡವಿ ಬಿದ್ದು ಗಾಯಗೊಂಡಿರುವ ಘಟನೆಗಳು ಸಂಭವಿಸಿವೆ. ಶ್ರೀಕೃಷ್ಣ ಜನ್ಮಾಷ್ಠಮಿ- ವಿಟ್ಲಪಿಂಡಿ ಉತ್ಸವಕ್ಕೆ ಆಗಮಿಸಿದ್ದ ಸಾವಿರಾರು ಭಕ್ತಾದಿಗಳು ಈ ರಸ್ತೆಯಲ್ಲೇ ಸಂಚರಿಸಿದ್ದರು. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಈ ರಸ್ತೆಯಲ್ಲಿ ಸಂಚರಿಸುವ ಪಾದಚಾರಿಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಆದಷ್ಟು ಬೇಗ ನಗರಸಭೆ ಈ ಪಾದಚಾರಿ ರಸ್ತೆಯನ್ನು ದುರಸ್ತಿಪಡಿಸುವಂತೆ ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಮತ್ತು ತಾರಾನಾಥ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.

Edited By :
Kshetra Samachara

Kshetra Samachara

22/08/2022 06:50 pm

Cinque Terre

10.06 K

Cinque Terre

4

ಸಂಬಂಧಿತ ಸುದ್ದಿ