ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ವಕ್ವಾಡಿ ಗ್ರಾಮದ ರಸ್ತೆಗೆ ಸ್ವಾತಂತ್ರ್ಯ ಹೋರಾಟಗಾರ ವಕ್ವಾಡಿ ವಿಕೆ ಐತಾಳ್ ಹೆಸರು ನಾಮಕರಣ

ಕುಂದಾಪುರ: ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಕುಂದಾಪುರ ತಾಲೂಕಿನ ವಕ್ವಾಡಿ ಗ್ರಾಮದ ರಸ್ತೆಗೆ ಸ್ವಾತಂತ್ರ್ಯ ಹೋರಾಟಗಾರ ವಕ್ವಾಡಿ ವಿಕೆ ಐತಾಳ್ ಅವರ ಹೆಸರಿಟ್ಟು ಸ್ವಾತಂತ್ರ್ಯ ದಿನಾಚರಣೆ ಯನ್ನು ವಿಶೇಷವಾಗಿ ಹಸ್ತ ಚಿತ್ತ ಫೌಂಡೇಶನ್(ರಿ) ವಕ್ವಾಡಿ ಹಾಗೂ ಗ್ರಾಮಸ್ಥರು ಆಚರಿಸಿದರು.

ಬಾಂಡ್ಯ ಎಜುಕೇಶನ್ ಟ್ರಸ್ಟ್ ನ ಮುಖ್ಯಸ್ಥರಾದ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ ನಾಮಫಲಕ ಉದ್ಘಾಟನೆ ನೆರವೇರಿಸಿದರು. ನಾಮಫಲಕ ಅನಾವರಣಗೊಳಿಸಿ ಮಾತಾಡಿದ ಅವರು ಇಂತಹ ಕಾರ್ಯಕ್ರಮ ಗಳು ಅಪರೂಪವಾದದ್ದು, ಸ್ವಾತಂತ್ರ್ಯ ಹೋರಾಟಗಾರರು ಇರುವ ಊರುಗಳಲ್ಲಿ ಇಂತಹ ಕಾರ್ಯಕ್ರಮಗಳಿಂದ ಆ ಊರಿನ ಗೌರವ ಹೆಚ್ಚುತ್ತದೆ ಎಂದು ಹೇಳಿದರು.

ಈ ವೇಳೆ ಮುಖ್ಯ ಅತಿಥಿಯಾಗಿ ಮಾತನಾಡಿದ ನಿವೃತ್ತ ಶಿಕ್ಷಕ ವೇಣುಗೋಪಾಲ್ ಹೆಗ್ಡೆ , ವಿ ಕೆ ಐತಾಳರು ಸ್ವಾತಂತ್ರಕ್ಕಾಗಿ ಹೋರಾಟ ನಡೆಸಿ ಜೈಲುವಾಸ ಅನುಭವಿಸಿದವರು. ಇಂದು ನಮ್ಮಊರಿನ ಗ್ರಾಮಸ್ಥರು ಈ ಅಮೃತ ಮಹೋತ್ಸವದ ಸಂದರ್ಭದಲ್ಲಿ ಅವರಿಗೆ ನೀಡಿರುವ ಗೌರವ ಮೆಚ್ಚುವಂತಹದ್ದು ಎಂದರು.

ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರಾದ ರವಿರಾಜ್ ಶೆಟ್ಟಿ, ಶಾರದ, ಆಸರೆ ಟ್ರಸ್ಟ್ ನ ಟ್ರಸ್ಟಿಯಾದ ಸತೀಶ್ ಪೂಜಾರಿ, ಆನಂದ ಆಚಾರ್, ಹಸ್ತ ಚಿತ್ತ ಫೌಂಡೇಷನ್ ನ ಅಧ್ಯಕ್ಷೆ ಶರ್ಮಿಳಾ ಕಾರಂತ್, ವಿಕೆ ಐತಾಳ್ ಅವರ ಮನೆಯವರಾದ ಲೀಲಾವತಿ ಐತಾಳ್ ಹಾಗೂ ಊರ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಗಿರೀಶ್ ಐತಾಳ್ ಸ್ವಾಗತಿಸಿದರು, ಅಕ್ಷತಾ ಗಿರೀಶ್ ಕಾರ್ಯಕ್ರಮ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

17/08/2022 03:41 pm

Cinque Terre

2.03 K

Cinque Terre

1

ಸಂಬಂಧಿತ ಸುದ್ದಿ