ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೆ.10 ಕ್ಕೆ ಒನ್ ವೇ ವಿಶೇಷ ರೈಲು ಓಡಾಟ : ಪನ್ವೆಲ್-ಮಂಗಳೂರು ಸೆಂಟ್ರಲ್ ನಡುವೆ ಚಿಕುಬುಕು

ಉಡುಪಿ : ಗಣೇಶ್ ಚತುರ್ಥಿಯ ಸಂದರ್ಭದಲ್ಲಿ ಪನ್ವೇಲ್ ಹಾಗೂ ಮಂಗಳೂರು ಸೆಂಟ್ರಲ್ ನಡುವೆ ಒನ್ ವೇ ವಿಶೇಷ ರೈಲನ್ನು ಓಡಿಸಲು ಕೊಂಕಣ ರೈಲ್ವೆ ನಿರ್ಧರಿಸಿದೆ.

ಸೆಂಟ್ರಲ್ ರೈಲ್ವೆ ಹಾಗೂ ದಕ್ಷಿಣ ರೈಲ್ವೆಯ ಸಹಯೋಗದೊಂದಿಗೆ ರೈಲು ನಂ.06049 ಪನ್ವೇಲ್- ಮಂಗಳೂರು ಸೆಂಟ್ರಲ್ ಒನ್ ವೇ ವಿಶೇಷ ರೈಲು ಸೆಪ್ಟಂಬರ್ 10ರ ಶನಿವಾರ ಬೆಳಗ್ಗೆ 10.45ಕ್ಕೆ ಪನ್ವೇಲ್ ನಿಂದ ಹೊರಡಲಿದ್ದು, ಮರುದಿನ ಬೆಳಗ್ಗೆ 6ಗಂಟೆಗೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ತಲುಪಲಿದೆ.

ಈ ರೈಲಿಗೆ ರೋಹಾ, ಖೇಡ್, ಚಿಪ್ಳುಣ್, ಸಂಗಮೇಶ್ವರ ರೋಡ್, ರತ್ನಗಿರಿ, ಕಂಕವಲ್ಲಿ, ಸಿಂಧುದುರ್ಗ, ಕುಡಾಲ್, ಸಾವಂತವಾಡಿ ರೋಡ್, ತೀವಿಂ, ಕರ್ಮಾಲಿ, ಮಡಗಾಂವ್ ಜಂಕ್ಷನ್, ಕಾನಕೋಣ, ಕಾರವಾರ, ಕುಮಟಾ, ಮುರ್ಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್ ಬೈಂದೂರು, ಕುಂದಾಪುರ, ಉಡುಪಿ, ಮುಲ್ಕಿ, ಮಂಗಳೂರು ಜಂಕ್ಷನ್, ಮಂಗಳೂರು ಸೆಂಟ್ರಲ್ ಗಳಲ್ಲಿ ನಿಲುಗಡೆ ಇರುತ್ತದೆ. ರೈಲು ಒಟ್ಟು 21 ಕೋಚ್ ಗಳನ್ನು ಹೊಂದಿರುತ್ತದೆ.

Edited By : Nirmala Aralikatti
Kshetra Samachara

Kshetra Samachara

15/08/2022 10:57 pm

Cinque Terre

8.32 K

Cinque Terre

0

ಸಂಬಂಧಿತ ಸುದ್ದಿ