ಸುಳ್ಯ : ಹೇಳಿ ಕೇಳಿ ಸುಳ್ಯ ಮೀಸಲಾತಿ ಆಧಾರಿತ ವಿಧಾನಸಭಾ ಕ್ಷೇತ್ರ. ಗ್ರಾಮೀಣ ಪ್ರದೇಶಗಳೇ ತುಂಬಿರುವ ಸುಳ್ಯದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ವಾಲ್ತಾಜೆ ರಸ್ತೆ ಅಭಿವೃದ್ಧಿ ವಿಚಾರದಲ್ಲಿ ತಾಲೂಕಿಗೆ ಹಿಡಿದ ಕನ್ನಡಿಯಂತಿದೆ.
ಸುಮಾರು ಅರವತ್ತು ವರ್ಷಗಳಿಂದ ಈ ರಸ್ತೆ ಸಾರ್ವಜನಿಕ ಸಂಚಾರಕ್ಕೆ ತೊಡಗಿಸಿಕೊಂಡಿದ್ದರೂ ಇದುವರೆಗೂ ಅಭಿವೃದ್ದಿ ಕಂಡಿಲ್ಲ. ಈ ರಸ್ತೆಯಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಕುಟುಂಬಗಳು ಸಂಚರಿಸುತ್ತಿವೆ. ನಡೆದಾಡಲೂ ಅಸಾಧ್ಯವಾದ ಈ ರಸ್ತೆಗೆ ಅಭಿವೃದ್ಧಿಗಾಗಿ ಹಲವಾರು ಬಾರಿ ಮನವಿ ಮಾಡಿದ್ದರೂ ಪ್ರಯಫಜನವಾಗಿಲ್ಲ.
ಇದೀಗ ಗ್ರಾಮಸ್ಥರೇ ಶ್ರಮದಾನದ ಮೂಲಕ ತಾತ್ಕಾಲಿಕ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆದರೆ ಒಂದು ಮಳೆ ಬಂದರೆ ಮತ್ತೆ ರಸ್ತೆ ಸಂಚಾರ ದುಸ್ತರವಾಗಲಿದೆ. ಅದ್ಯಾಕೆ ಆಡಳಿತ ವರ್ಗ ಇಲ್ಲಿನ ಜನರ ಗೋಳನ್ನು ಕೇಳಿಸಿಕೊಳ್ಳುತ್ತಿಲ್ಲವೋ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ರಸ್ತೆ ಅಭಿವೃದ್ಧಿ ಕಾಣದೇ ಇದ್ದರೆ ಸಂಘಟಿತ ಹೋರಾಟಕ್ಕೆ ಸಿದ್ಧತೆ ನಡೆಸಿದ್ದಾರೆ.
ಶನಿವಾರ ಶ್ರಮದಾನದ ಮೂಲಕ ಕಡ್ಲಾರು ಪ್ರದೇಶದಲ್ಲಿ ರಸ್ತೆಗೆ ಮಣ್ಣು ಹಾಕಲಾಗಿದ್ದು, ಗ್ರಾಮಸ್ಥರಾದ ಕೃಷ್ಣ ಕುಮಾರ್ ಪಿಲಿಂಜ, ಮನೋಜ್ ಗುಡ್ಡೆ, ಪದ್ಮ ಮೀನಾಜೆ, ಕೇಶವ ಕೊರಂಬಡ್ಕ, ವೇಣು ಚಿದ್ಗಲ್, ರವೀಂದ್ರ ಕೋಡೊಂಬು, ತೀರ್ಥರಾಮ ಕೊಂಬೆಟ್ಟು, ಚಂದ್ರಶೇಖರ ಕಡೋಡಿ ಭಾಗವಹಿಸಿದ್ದರು.
Kshetra Samachara
13/08/2022 07:47 pm