ಮಲ್ಪೆ: ಯಾಂತ್ರೀಕೃತ ಮೀನುಗಾರಿಕಾ ಋತು ಆರಂಭವಾದರೂ ನಿರಂತರ ಮಳೆ ಮತ್ತು ಪ್ರತಿಕೂಲ ಹವಾಮಾನದಿಂದ ಬೋಟ್‌ಗಳು ಸಮುದ್ರಕ್ಕೆ ಇಳಿಯುತ್ತಿಲ್ಲ. ಇದು ಮೀನು ಖರೀದಿ ಮಾಡುವ ಗ್ರಾಹಕರ ಮೇಲೂ ಪರಿಣಾಮ ಬೀರಿದ್ದು ಮೀನಿನ ದರ ಗಗನಕ್ಕೇರಿದೆ. ಇದರಿಂದಾಗಿ ಮೀನು ಪ್ರಿಯರು ಮೀನಿಗಾಗಿ ಪರದಾಟ ನಡೆಸುವಂತಾಗಿದೆ.
ಮೀನುಗಾರರು ಎಲ್ಲ ಸಿದ್ಧತೆ ಮಾಡಿಕೊಂಡು ಕಡಲಿಗಿಳಿಯಲು ಬೋಟು ತಯಾರಾಗಿತ್ತು. ಆದರೆ ಹವಾಮಾನ ವೈಪರೀತ್ಯದಿಂದ ಬೋಟುಗಳನ್ನು ಕಡಲ ತೀರದಲ್ಲೇ ಲಂಗರು ಹಾಕಿದ್ದಾರೆ. ಕಡಲಿನಲ್ಲಿ ಎದ್ದಿರುವ ತೂಫಾನ್ ಆಳಸಮುದ್ರ ಮೀನುಗಾರಿಕೆಗೆ ಅಡ್ಡಿಪಡಿಸಿದೆ. ಉಡುಪಿ ಜಿಲ್ಲೆಯ ಮಲ್ಪೆ, ಗಂಗೊಳ್ಳಿ ಇತ್ಯಾದಿ ಪ್ರಮುಖ ಬಂದರುಗಳಲ್ಲಿ ಸಾವಿರಾರು ಬೋಟುಗಳು ದಡದಲ್ಲೇ ಬಾಕಿಯಾಗಿವೆ. ಯಾಂತ್ರೀಕೃತ ಬೋಟುಗಳು ಆಳ ಸಮುದ್ರ ಮೀನುಗಾರಿಕೆಗೆ ತೆರಳದೇ ಇರುವುದರಿಂದ ತಾಜಾಮೀನಿನ ಲಭ್ಯತೆ ಸದ್ಯಕ್ಕಿಲ್ಲ. ಸಕಾಲದಲ್ಲಿ ಮೀನುಗಾರಿಕೆ ಆರಂಭವಾದರೆ ಈ ಹೊತ್ತಿಗೆ ಭರಪೂರ ಮೀನು ಸಿಗುತ್ತಿತ್ತು.
Kshetra Samachara
12/08/2022 02:17 pm